alex Certify ಕಣ್ಣಿನ ಊತ ಕಡಿಮೆ ಮಾಡುತ್ತೆ ಈ ಸಿಂಪಲ್ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿನ ಊತ ಕಡಿಮೆ ಮಾಡುತ್ತೆ ಈ ಸಿಂಪಲ್ ಟಿಪ್ಸ್

ಕೆಲವೊಮ್ಮೆ ಕಣ್ಣಿನಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದ್ರಿಂದಾಗಿ ಮನೆಯಿಂದ ಹೊರ ಹೋಗುವುದೂ ಕಷ್ಟವಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಸುಸ್ತು, ಬಹಳ ಹೊತ್ತು ಕಂಪ್ಯೂಟರ್ ಅಥವಾ ಟಿವಿ, ಮೊಬೈಲ್ ನೋಡುತ್ತಿದ್ದರೆ, ಅನಿದ್ರೆ ಇವೆಲ್ಲವೂ ಕಾರಣವಾಗುತ್ತದೆ.

ನಿಮಗೂ ಆಗಾಗ ಕಣ್ಣಿನ ಊತ ಕಾಡುತ್ತಿದ್ದರೆ ಈ ಮನೆ ಮದ್ದನ್ನು ಬಳಸಿ ಸುಲಭವಾಗಿ ಕಣ್ಣಿನ ಊತಕ್ಕೆ ಗುಡ್ ಬೈ ಹೇಳಿ.

ಸೌತೆಕಾಯಿ : ಸೌತೆಕಾಯಿ ಕೇವಲ ಕಣ್ಣಿನ ಊತವನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಜೊತೆಗೆ ಕಣ್ಣು ಹೊಳಪು ಪಡೆಯುತ್ತದೆ. ಕಣ್ಣುಗಳು ಫ್ರೆಶ್ ಆಗುತ್ವೆ. ಸೌತೆಕಾಯಿಯನ್ನು ಕತ್ತರಿಸಿ 8-10 ನಿಮಿಷಗಳ ಕಾಲ ಕಣ್ಣಿನ ಮೇಲಿಟ್ಟುಕೊಳ್ಳಿ. ಇದ್ರಿಂದ ಊತ ಕಡಿಮೆಯಾಗುತ್ತದೆ.

ಆಲೂಗಡ್ಡೆ : ಆಲೂಗಡ್ಡೆಯನ್ನು ಮಿಕ್ಸಿ ಮಾಡಿ ರಸ ತೆಗೆದುಕೊಳ್ಳಿ. ನಂತ್ರ ಅದಕ್ಕೆ ಎಣ್ಣೆ ಬೆರೆಸಿ ಕಣ್ಣಿನ ಸುತ್ತ ಹಚ್ಚಿಕೊಳ್ಳಿ.

ನೀರು : ನೀರು ಎಲ್ಲ ರೋಗಕ್ಕೂ ಮದ್ದು. ಪ್ರತಿದಿನ 8-10 ಗ್ಲಾಸ್ ನೀರು ಕುಡಿಯಿರಿ. ಇದ್ರಿಂದ ಕಣ್ಣಿನ ಊತ ಕಡಿಮೆಯಾಗುತ್ತದೆ. ಬೆಚ್ಚಗಿನ ನೀರು ಅಥವಾ ಹಾಲಿನಿಂದ ಕಣ್ಣನ್ನು ತೊಳೆದುಕೊಳ್ಳಿ.

ಆಲೋವೇರಾ ಜೆಲ್ : ಆಲೋವೇರಾ ಜೆಲ್ ಕಣ್ಣಿಗೆ ಬಹಳ ಪ್ರಯೋಜನಕಾರಿ. ಆಲೋವೇರಾ ಎಲೆಯನ್ನು ಕಟ್ ಮಾಡಿ ಜೆಲ್ ತೆಗೆದು ಅದನ್ನು ಕಣ್ಣಿನ ಮೇಲ್ಭಾಗಕ್ಕೆ ಹಚ್ಚಿಕೊಳ್ಳಿ.

ಜೇನುತುಪ್ಪ : ಒಂದು ಚಮಚ ಜೇನುತುಪ್ಪಕ್ಕೆ ನೆಲ್ಲಿಕಾಯಿ ರಸವನ್ನು ಬೆರೆಸಿ ಎರಡು ಬಾರಿ ಕಣ್ಣನ್ನು ತೊಳೆಯಿರಿ. ಇದ್ರಿಂದ ಉರಿ ಕಡಿಮೆಯಾಗುತ್ತದೆ. ಕಣ್ಣಿನಲ್ಲಿರುವ ಸೋಂಕು ಕೂಡ ದೂರವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...