
ಇದಕ್ಕೆ ಆಪ್ಟಿಕಲ್ ಇಲ್ಯೂಜನ್ ಚಿತ್ರ ಸವಾಲು ಅಂತ ಹೇಳಲಾಗುತ್ತೆ. ಈ ಚಿತ್ರವನ್ನ ಥಟ್ ಅಂತ ನೋಡಿದಾಗ ನಿಮಗೆ ಇದು ಒಂದೇ ಚಿತ್ರ ಅಂತ ಅನಿಸುತ್ತೆ. ಸ್ವಲ್ಪ ಗಮನ ಇಟ್ಟು ನೋಡಿದಾಗ, ಒಂದೇ ಚಿತ್ರದಲ್ಲಿ ಎರಡು ಮೂರು ಪ್ರಾಣಿಗಳು ಇರುವುದು ಗಮನಕ್ಕೆ ಬರುತ್ತೆ. ಇನ್ನಷ್ಟು ಏಕಾಗ್ರತೆ ಚಿತ್ತದಿಂದ ನೋಡಿದಾಗ ಈ ಚಿತ್ರದಲ್ಲಿ ಇನ್ನೂ ಅನೇಕ ಪ್ರಾಣಿಗಳ ಚಿತ್ರ ಇರುವುದು ಗೊತ್ತಾಗುತ್ತೆ.
ಮೆದುಳಿಗೆ ಕೆಲಸ ಕೊಡುವಂತ ಚಿತ್ರ ಇದಾಗಿದೆ. ಭ್ರಮೆ ಹುಟ್ಟಿಸುವಂತಿರೋ ಈ ಚಿತ್ರ ನೋಡಿ ನೆಟ್ಟಿಗರು ತಲೆ ಕೆರೆದುಕೊಂಡು ಈ ಚಿತ್ರದಲ್ಲಿ ಅಡಗಿರುವಂತಹ ಬೇರೆ-ಬೇರೆ ಪ್ರಾಣಿಗಳ ಚಿತ್ರವನ್ನ ಹುಡುಕುತ್ತಿದ್ಧಾರೆ. ಇದೊಂದು ಮೋಜಿನ ಆಟವಾಗಿದ್ದು, ಈ ಜಟಿಲ ರೀತಿಯ ಸವಾಲ್‌ನ್ನ ಕೇವಲ 1% ಜನರಷ್ಟೇ ಬಗೆಹರಿಸಿದ್ದಾರೆ. ನೀವು ಬೇಕಾದಲ್ಲಿ ಈ ಆಪ್ಟಿಕಲ್ ಇನ್ಯೂಜನ್ ಚಿತ್ರ ಸವಾಲನ್ನ ಸ್ವೀಕರಿಸಿ, ಇದರಲ್ಲಿ ಇರುವ ಪ್ರಾಣಿಗಳನ್ನ ಕಂಡು ಹಿಡಿಯಲು ಪ್ರಯತ್ನಿಸಿ. ಅದು ಕೂಡಾ 1 ನಿಮಿಷ ಕಾಲಾವಕಾಶದಲ್ಲಿ ಮಾತ್ರ. ಆ ನಂತರ ಈ ಕೆಳಗಿನ ಉತ್ತರವನ್ನ ನೋಡಿ.
ನೋಡಿದಾಕ್ಷಣ ಕಪ್ಪು ಆನೆಯಂತೆ ಕಾಣುವ ಈ ಚಿತ್ರದ ಮಧ್ಯಭಾಗದಲ್ಲಿ ಕತ್ತೆಯ ಚಿತ್ರ ಕಾಣಿಸುತ್ತೆ. ಅದೇ ಕತ್ತೆಯ ಮಧ್ಯಭಾಗದಲ್ಲಿ ಶ್ವಾನ, ಶ್ವಾನದ ಮಧ್ಯದಲ್ಲಿ ಬೆಕ್ಕು ನೋಡಬಹುದಾಗಿದೆ. ಸಾಮಾನ್ಯವಾಗಿ ಈ ರೀತಿಯ ಆಪ್ಟಿಕಲ್ ಇಲ್ಯೂಜನ್ ಚಿತ್ರದಲ್ಲಿ 4-5 ಪ್ರಾಣಿಗಳನ್ನಷ್ಟೆ ನೋಡಬಹುದು. ಆದರೆ ಈ ಚಿತ್ರ ಇನ್ನೂ ವಿಶೇಷವಾಗಿದೆ. ಕಾರಣ ಇಲ್ಲಿ 16 ಬಗೆಯ ಪ್ರಾಣಿಗಳನ್ನ ಕಾಣಬಹುದಾಗಿದೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅದು ನಿಮಗೆ ಸ್ಪಷ್ಟವಾಗಿ ಕಾಣಿಸುತ್ತೆ. ಇಲಿ, ಮೀನು, ಸರ್ಪ, ಸೊಳ್ಳೆ, ಆಮೆ, ಡಾಲ್ಫಿನ್, ಮೊಸಳೆ, ಪಕ್ಷಿ, ಕೋಳಿ, ಸಿಗಡಿ ಹಾಗೂ ನೀರು ನಾಯಿಯನ್ನ ಈ ಚಿತ್ರದಲ್ಲಿ ನೋಡಬಹುದು. ಇಷ್ಟು ಪ್ರಾಣಿಗಳಲ್ಲಿ ನೀವು ಎಷ್ಟು ಪ್ರಾಣಿಗಳನ್ನ ಕಂಡು ಹಿಡಿದಿದ್ದಿರಾ?