
ಇಲ್ಲಿ ಮೂವರು ಮಕ್ಕಳು ಒಂದು ಸಬ್ರೋ ಅನ್ನೊ ಪಿಜ್ಜಾ ಅಂಗಡಿಗೆ ಹೋಗಿದ್ದಾರೆ. ಆ ಅಂಗಡಿ ಒಳಗೆ ಹೋದವರೇ ಅಲ್ಲಿದ್ದ ಟೇಬಲ್ ಮೇಲೆ ಕುಳಿತುಕೊಳ್ಳುತ್ತಾರೆ. ಅವರಿಗೆ ಅಲ್ಲಿ ತಿನ್ನಲು ಏನಾದರೂ ಸಿಗುತ್ತೆ ಅನ್ನೋ ಆಸೆ. ಹಸಿವೆಯಿಂದ ಸುತ್ತಲೂ ಕಣ್ಣಾಡಿಸುತ್ತಿರುವಾಗಲೇ ಅಲ್ಲಿಗೆ ಬರುತ್ತಾನೆ ಅದೇ ಅಂಗಡಿಯ ಸಿಬ್ಬಂದಿ.
ಸಬ್ರೋ ಅಂಗಡಿಯಲ್ಲಿ ಕೆಲಸ ಮಾಡುವ ಈ ಸಿಬ್ಬಂದಿ, ಬಂದು ಅವರನ್ನ ಹೊರಗೆ ಅಟ್ಟಿಬಿಡುತ್ತಾನೆ. ಆತ ಗದರಿಸಿದ ಪರಿಗೆ ಆ ಮಕ್ಕಳು ಶಾಕ್ ಆಗಿರ್ತಾರೆ. ಅಷ್ಟಕ್ಕೂ ಆತ ಆ ಮಕ್ಕಳನ್ನ ಹಾಗೆ ಹೊರಗೆ ಕಳುಹಿಸಿದ್ದು ಯಾಕೆ ಗೊತ್ತಾ..? ಆ ಮಕ್ಕಳು ಹಾಕಿದ ಬಟ್ಟೆ. ಅವರಿಗೆ ಅಲ್ಲಿದ್ದ ಪಿಜ್ಜಾ ಖರೀದಿಸಿ ತಿನ್ನುವಷ್ಟು ಹಣ ಇಲ್ಲ ಅಂತ ಆತ ತೀರ್ಮಾನಿಸಿಬಿಟ್ಟಿದ್ದ.
ಹಸಿದು, ಆಸೆಯಿಂದ ಬಂದ ಮಕ್ಕಳು ಬೇರೆ ವಿಧಿಯೇ ಇಲ್ಲದೇ ಪಿಜ್ಜಾ ಅಂಗಡಿಯಿಂದ ಹೊರಗೆ ಹೋಗುತ್ತಾರೆ. ಆ ಮಕ್ಕಳಿಗೆ ಏನು ಬೇಕು ಅಂತ ಕೇಳುವಷ್ಟು ಸೌಜನ್ಯ ಆ ವ್ಯಕ್ತಿಗೆ ಇರಲಿಲ್ಲ. ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಲಾಗಿರೋ ವಿಡಿಯೋ ನೋಡಿ ನೆಟ್ಟಿಗರು ಮನುಷ್ಯ ಎಷ್ಟು ಯಾಂತ್ರಿಕನಾಗಿ ಬಿಟ್ಟಿದ್ದಾನೆ. ಆತನಿಗೆ ಕರುಣೆ, ಮನುಷ್ಯತ್ವವೇ ಇಲ್ಲಾ ಅಂತ ಹೇಳಿ ಬೈಯ್ಯುತ್ತಿದ್ದಾರೆ.