ನವರಾತ್ರಿ ಶುರುವಾಗಿದೆ. ಕೆಲವರು 9 ದಿನಗಳ ಕಾಲ ಕಲಶ ಸ್ಥಾಪನೆ ಮಾಡಿ ಮನೆಯಲ್ಲಿ ದುರ್ಗೆ ಪೂಜೆ ಮಾಡಿದ್ರೆ ಮತ್ತೆ ಕೆಲವರು ಕೊನೆಯ ಮೂರು ದಿನಗಳ ಕಾಲ ದುರ್ಗೆ ಆರಾಧನೆ ಮಾಡ್ತಾರೆ. ನವರಾತ್ರಿಯಲ್ಲಿ ಅಲಂಕಾರಕ್ಕೆ ಹೆಚ್ಚಿನ ಮಹತ್ವವಿದೆ.
ಕೆಲವರು ನವರಾತ್ರಿಗೂ ಮುನ್ನವೇ ಮನೆಯನ್ನು ಅಲಂಕರಿಸಿದ್ರೆ ಮತ್ತೆ ಕೆಲವರು ನವರಾತ್ರಿ ಸಂದರ್ಭದಲ್ಲಿ ಮನೆಯನ್ನು ಅಲಂಕರಿಸುತ್ತಾರೆ. ಕೆಲವರು ಪ್ರತಿ ದಿನ ಮನೆಗೆ ಹೊಸ ಲುಕ್ ನೀಡಲು ಬಯಸ್ತಾರೆ.
ʼಆಧಾರ್ʼ ಅಪ್ಡೇಟ್‌ಗೆ ಸೆಲ್ಫ್ ಸರ್ವೀಸ್: ಪರಿಷ್ಕರಣೆ ಶುಲ್ಕದ ಕುರಿತು ಇಲ್ಲಿದೆ ಡೀಟೇಲ್ಸ್
ನವರಾತ್ರಿಯಲ್ಲಿ ಸುಲಭವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಹೇಗೆ ಮನೆ ಅಲಂಕಾರ ಮಾಡಬೇಕು ಎಂಬುದನ್ನು ನಾವು ಹೇಳ್ತೇವೆ.
ನಿಮ್ಮ ಮನೆಯನ್ನು ತಾಜಾ ಹೂವುಗಳು ಮತ್ತು ಹೂವಿನ ಹಾರಗಳಿಂದ ಅಲಂಕರಿಸಬಹುದು. ಮನೆಗೆ ಸಾಂಪ್ರದಾಯಿಕ ಲುಕ್ ಕೂಡ ನೀಡಬಹುದು. ಗಾಜು, ದಾರ, ಮಣಿಗಳಿಂದ ಮನೆ ಅಲಂಕಾರ ಮಾಡಬಹುದು. ರಾಜಸ್ತಾನಿ ಮತ್ತು ಗುಜರಾತಿ ವಸ್ತುಗಳಿಗೆ ಪ್ರಾಮುಖ್ಯತೆ ನೀಡಿ ಮನೆ ವರ್ಣಮಯವಾಗಿರುತ್ತದೆ. ಮನೆಗೆ ಮಾವಿನ ಎಲೆಗಳಿಂದ ಸರಳವಾಗಿ ಅಲಂಕಾರ ಮಾಡಬಹುದು.
ಜೇಡಿಮಣ್ಣಿನಿಂದ ಮಾಡಿದ ಕಲಶಕ್ಕೆ ಸಣ್ಣ ಸಣ್ಣ ಕನ್ನಡಿಗಳು, ಕಸೂತಿಗಳಿಂದ ಅಲಂಕಾರ ಮಾಡಿ. ಅಲಂಕಾರಗೊಂಡ ಕಲಶಕ್ಕೆ ನೀರು ತುಂಬಿಸಿ ದೇವಿ ಪಕ್ಕದಲ್ಲಿಡಿ. ಮನೆ ಮುಖ್ಯದ್ವಾರದಲ್ಲೂ ಎರಡು ಕಳಶವನ್ನು ಇಡಬಹುದು. ಮಾವಿನ ಎಲೆ, ತೆಂಗಿನಕಾಯಿಯಿಂದ ಅಲಂಕಾರ ಮಾಡಿದ್ರೂ ಸರಳವಾಗಿ, ಸುಂದರವಾಗಿ ಕಾಣುತ್ತದೆ.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅಮೆಜಾನ್ ಇಂಡಿಯಾದಿಂದ ‘ಬಂಪರ್’ ಕೊಡುಗೆ
ನವರಾತ್ರಿಯಲ್ಲಿ ರಂಗೋಲಿ ಶುಭಕರ. ಮನೆಯಲ್ಲಿ ದುರ್ಗೆ ಪ್ರತಿಷ್ಠಾಪನೆ ಸ್ಥಳದಿಂದ ಹಿಡಿದು ಮುಖ್ಯದ್ವಾರದವರೆಗೆ ರಂಗೋಲಿ ಹಾಕಬಹುದು. ಮಾರುಕಟ್ಟೆಯಲ್ಲಿ ಸಾಕಷ್ಟು ರಂಗೋಲಿಗಳು, ಬಣ್ಣಗಳು ಲಭ್ಯವಿದೆ. ಇದು ಸಾಧ್ಯವಿಲ್ಲ ಎನ್ನುವವರು ಹೂವಿನಿಂದ ರಂಗೋಲಿ ಬಿಡಿಸಬಹುದು.