alex Certify ಕಡಲ ತೀರದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯ ನಡಿಗೆ; ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಲ ತೀರದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯ ನಡಿಗೆ; ವಿಡಿಯೋ ವೈರಲ್​

ಗೋವಾ ಅಥವಾ ವಿದೇಶಗಳ ಸಮುದ್ರ ತೀರದಲ್ಲಿ ವಿಹರಿಸುವವರು ಸಾಮಾನ್ಯವಾಗಿ ಬಿಕಿನಿ ಧರಿಸಿರುವುದು ಕಂಡು ಬರುತ್ತದೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ಸಾಂಪ್ರದಾಯಿಕ ಧರಿಸಿನಲ್ಲಿ ಮಹಿಳೆ ವಾಕ್​ ಮಾಡುವುದು ನೆಟ್ಟಿಗರ ಗಮನ ಸೆಳೆದಿದೆ.

ರಿಷಿಕಾ ಗುರ್ಜಾರ್​ ಅವರು ಟ್ವಿಟ್ಟರ್​ನಲ್ಲಿ ಹಂಚಿಕೊಂಡ ವಿಡಿಯೊವನ್ನು ಮೆಮೆ ರೂಪದಲ್ಲಿ ಗುರುತಿಸಲಾಗುತ್ತಿದೆ. ಬಿಕಿನಿ ಧರಿಸಿದವರ ಜೊತೆಗೆ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿರುವ ಮಹಿಳೆಯನ್ನು ಕ್ಲಿಪ್​ ತೋರಿಸುತ್ತದೆ.

ದೈನಂದಿನ ಜೀವನದಲ್ಲಿ ಇದು ಸಾಮಾನ್ಯ ಸನ್ನಿವೇಶದಂತೆ ತೋರುತ್ತಿದ್ದರೂ, ಬೀಚ್​ನಲ್ಲಿ ಬಿಸಿಲಿನ ದಿನದಲ್ಲಿ ಆನಂದಿಸುತ್ತಿರುವ ಬಿಕಿನಿ ಧರಿಸಿದ ಮಹಿಳೆಯರ ನಡುವೆ ಮಹಿಳೆ ಖಂಡಿತವಾಗಿಯೂ ತನ್ನ ಉಡುಪಿನಲ್ಲಿ ಎದ್ದು ಕಾಣುತ್ತಾಳೆ.

ನೆಟ್ಟಿಗರಿಗೆ ಈ ವಿಡಿಯೋ ಸಾಕಷ್ಟು ರಂಜನೆ ಒದಗಿಸಿದೆ. ಇದನ್ನು ಈಗಾಗಲೇ 98 ಸಾವಿರ ಬಾರಿ ವೀಕ್ಷಣೆಯಾಗಿದೆ. ಮಹಿಳೆಯ ಬಟ್ಟೆಯ ಆಯ್ಕೆಯನ್ನು ಶ್ಲಾಘಿಸುವುದರಿಂದ ಹಿಡಿದು ಮೋಜಿನ ಕಾಮೆಂಟ್​ಗಳನ್ನು ಹಂಚಿಕೊಳ್ಳಲಾಗಿದೆ.

ಸಮುದ್ರತೀರದಲ್ಲಿ ಮಹಿಳೆಯ ಅಸಾಮಾನ್ಯ ಆಯ್ಕೆಯ ಬಟ್ಟೆಗಳ ಬಗ್ಗೆ ನೀವು ಏನು ಯೋಚಿಸುತ್ತೀರಿ?

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...