ಗೋವಾ ಅಥವಾ ವಿದೇಶಗಳ ಸಮುದ್ರ ತೀರದಲ್ಲಿ ವಿಹರಿಸುವವರು ಸಾಮಾನ್ಯವಾಗಿ ಬಿಕಿನಿ ಧರಿಸಿರುವುದು ಕಂಡು ಬರುತ್ತದೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ಸಾಂಪ್ರದಾಯಿಕ ಧರಿಸಿನಲ್ಲಿ ಮಹಿಳೆ ವಾಕ್ ಮಾಡುವುದು ನೆಟ್ಟಿಗರ ಗಮನ ಸೆಳೆದಿದೆ.
ರಿಷಿಕಾ ಗುರ್ಜಾರ್ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡ ವಿಡಿಯೊವನ್ನು ಮೆಮೆ ರೂಪದಲ್ಲಿ ಗುರುತಿಸಲಾಗುತ್ತಿದೆ. ಬಿಕಿನಿ ಧರಿಸಿದವರ ಜೊತೆಗೆ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿರುವ ಮಹಿಳೆಯನ್ನು ಕ್ಲಿಪ್ ತೋರಿಸುತ್ತದೆ.
ದೈನಂದಿನ ಜೀವನದಲ್ಲಿ ಇದು ಸಾಮಾನ್ಯ ಸನ್ನಿವೇಶದಂತೆ ತೋರುತ್ತಿದ್ದರೂ, ಬೀಚ್ನಲ್ಲಿ ಬಿಸಿಲಿನ ದಿನದಲ್ಲಿ ಆನಂದಿಸುತ್ತಿರುವ ಬಿಕಿನಿ ಧರಿಸಿದ ಮಹಿಳೆಯರ ನಡುವೆ ಮಹಿಳೆ ಖಂಡಿತವಾಗಿಯೂ ತನ್ನ ಉಡುಪಿನಲ್ಲಿ ಎದ್ದು ಕಾಣುತ್ತಾಳೆ.
ನೆಟ್ಟಿಗರಿಗೆ ಈ ವಿಡಿಯೋ ಸಾಕಷ್ಟು ರಂಜನೆ ಒದಗಿಸಿದೆ. ಇದನ್ನು ಈಗಾಗಲೇ 98 ಸಾವಿರ ಬಾರಿ ವೀಕ್ಷಣೆಯಾಗಿದೆ. ಮಹಿಳೆಯ ಬಟ್ಟೆಯ ಆಯ್ಕೆಯನ್ನು ಶ್ಲಾಘಿಸುವುದರಿಂದ ಹಿಡಿದು ಮೋಜಿನ ಕಾಮೆಂಟ್ಗಳನ್ನು ಹಂಚಿಕೊಳ್ಳಲಾಗಿದೆ.
ಸಮುದ್ರತೀರದಲ್ಲಿ ಮಹಿಳೆಯ ಅಸಾಮಾನ್ಯ ಆಯ್ಕೆಯ ಬಟ್ಟೆಗಳ ಬಗ್ಗೆ ನೀವು ಏನು ಯೋಚಿಸುತ್ತೀರಿ?