alex Certify ಕಟ್ಟಡ ಕಾರ್ಮಿಕರ ಜೊತೆ ಕಟ್ಟೆ ಮೇಲೆ ಕುಳಿತು ಸರಳತೆ ಮೆರೆದ ಪ್ರಧಾನಿ ಮೋದಿ..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಟ್ಟಡ ಕಾರ್ಮಿಕರ ಜೊತೆ ಕಟ್ಟೆ ಮೇಲೆ ಕುಳಿತು ಸರಳತೆ ಮೆರೆದ ಪ್ರಧಾನಿ ಮೋದಿ..! ವಿಡಿಯೋ ವೈರಲ್​

ಪ್ರಧಾನಿ ನರೇಂದ್ರ ಮೋದಿ ತಮಗೆಂದು ಇರಿಸಲಾಗಿದ್ದ ಖುರ್ಚಿಯನ್ನು ತೆಗೆದು ಕಟ್ಟಡ ಕಾರ್ಮಿಕರ ಜೊತೆಯಲ್ಲಿ ಮೆಟ್ಟಿಲುಗಳ ಮೇಲೆ ಕುಳಿತ ದೃಶ್ಯವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಪ್ರಧಾನಿ ಮೋದಿ ಸರಳತೆಯನ್ನು ಮೆಚ್ಚಿದ ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.ಸೋಮವಾರದಂದು ಕಾಶಿ ವಿಶ್ವನಾಥ ಕಾರಿಡಾರ್​ ಯೋಜನೆಯಲ್ಲಿ ಕೆಲಸ ಮಾಡಿದ ಕಟ್ಟಡ ಕಾರ್ಮಿಕರೊಂದಿಗೆ ಕುಳಿತು ಪ್ರಧಾನಿ ಮೋದಿ ಊಟವನ್ನು ಸವಿದರು.

ಸೋಮವಾರ ಬೆಳಗ್ಗೆ ವಾರಣಾಸಿಗೆ ಆಗಮಿಸಿದ ಪ್ರಧಾನಿ ಮೋದಿ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಕಾಶಿ ವಿಶ್ವನಾಥ ಕಾರಿಡಾರ್​ ಉದ್ಘಾಟನೆಗೂ ಮುನ್ನ ಲಲಿತಾ ಘಾಟ್​ನಲ್ಲಿ ಪವಿತ್ರ ಗಂಗಾ ಸ್ನಾನವನ್ನು ಮಾಡಿದರು. ಗಂಗಾ ನದಿಯ ಜೊತೆಯಲ್ಲಿ ಎಲ್ಲಾ ಘಾಟ್​ಗಳ ಮೂಲಕ ಕಾಶಿ ವಿಶ್ವನಾಥ ದೇಗುಲವನ್ನು ಸಂಪರ್ಕಿಸುವ ಕಾರಿಡಾರ್​ ಇದಾಗಿದೆ. ಈ ಕಾರಿಡಾರ್​ನ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ ಹರ ಹರ ಮಹದೇವ ಎಂದು ಘೋಷಣೆ ಕೂಗಿದ್ದರು.

ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್​ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಶಿ ವಿಶ್ವನಾಥನ ದೇಗುಲದಲ್ಲಿ ಇದೊಂದು ಹೊಸ ಅಧ್ಯಾಯವಾಗಿದೆ. ಕಾಶಿ ವಿಶ್ವನಾಥ ಆವರಣವು ಭವ್ಯವಾದ ಒಂದು ಭವನವಾಗಿದೆ. ಇದು ಭಾರತದ ಸನಾತನ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಸಂಕೇತವಾಗಿದೆ ಎಂದು ಹೇಳಿದ್ದಾರೆ.

— Shefali Vaidya. ?? (@ShefVaidya) December 16, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...