
ಸೋಮವಾರ ಬೆಳಗ್ಗೆ ವಾರಣಾಸಿಗೆ ಆಗಮಿಸಿದ ಪ್ರಧಾನಿ ಮೋದಿ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಗೂ ಮುನ್ನ ಲಲಿತಾ ಘಾಟ್ನಲ್ಲಿ ಪವಿತ್ರ ಗಂಗಾ ಸ್ನಾನವನ್ನು ಮಾಡಿದರು. ಗಂಗಾ ನದಿಯ ಜೊತೆಯಲ್ಲಿ ಎಲ್ಲಾ ಘಾಟ್ಗಳ ಮೂಲಕ ಕಾಶಿ ವಿಶ್ವನಾಥ ದೇಗುಲವನ್ನು ಸಂಪರ್ಕಿಸುವ ಕಾರಿಡಾರ್ ಇದಾಗಿದೆ. ಈ ಕಾರಿಡಾರ್ನ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ ಹರ ಹರ ಮಹದೇವ ಎಂದು ಘೋಷಣೆ ಕೂಗಿದ್ದರು.
ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಶಿ ವಿಶ್ವನಾಥನ ದೇಗುಲದಲ್ಲಿ ಇದೊಂದು ಹೊಸ ಅಧ್ಯಾಯವಾಗಿದೆ. ಕಾಶಿ ವಿಶ್ವನಾಥ ಆವರಣವು ಭವ್ಯವಾದ ಒಂದು ಭವನವಾಗಿದೆ. ಇದು ಭಾರತದ ಸನಾತನ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಸಂಕೇತವಾಗಿದೆ ಎಂದು ಹೇಳಿದ್ದಾರೆ.