ಚರ್ಮದ ಅಲರ್ಜಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಇದಕ್ಕೆ ಮನೆಯಲ್ಲೇ ಔಷಧಿ ತಯಾರಿಸಬಹುದು.
ಕಾಡಿನ ಗಿಡವೆಂದು ಕರೆಯಲ್ಪಡುವ ಎಕ್ಕೆ ಗಿಡದ ನಾಲ್ಕೈದು ಹನಿಗಳನ್ನು ಒಂದು ಬಟ್ಟಲಿಗೆ ಹಾಕಿ, ಇದಕ್ಕೆ ಬೇವಿನ ಎಣ್ಣೆಯನ್ನು ಒಂದು ಚಮಚದಷ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಚರ್ಮಕ್ಕೆ ತುರಿಕೆ ಅಥವಾ ಕಜ್ಜಿ ಎಲ್ಲಿ ಆಗಿದೆಯೋ ಅಲ್ಲೆಲ್ಲಾ ಹಚ್ಚಿ. ವಾರಕ್ಕೆ ಮೂರು ಬಾರಿ ಈ ಔಷಧಿಯನ್ನು ಹಚ್ಚಿಕೊಂಡರೆ ಚರ್ಮದ ಸಮಸ್ಯೆಗಳು ಸಂಪೂರ್ಣ ನಿವಾರಣೆಯಾಗುತ್ತದೆ.
ಇನ್ನೊಂದು ವಿಧಾನವೆಂದರೆ ನಾಲ್ಕೈದು ಕರ್ಪೂರವನ್ನು ಪೌಡರ್ ಮಾಡಿ, ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ. ಇದಕ್ಕೆ ಹಾಗಲಕಾಯಿ ಪೇಸ್ಟ್ ಸೇರಿಸಿ. ಎಲ್ಲವನ್ನೂ ಮಿಕ್ಸ್ ಮಾಡಿ ಕಜ್ಜಿ ಅಥವಾ ತುರಿಕೆ ಇರುವ ಜಾಗಕ್ಕೆ ಹಚ್ಚಿ. ಐದು ದಿನಗಳ ಹೀಗೆ ಮಾಡಿದರೆ ಕಜ್ಜಿ ಅಥವಾ ತುರಿಕೆ ಇಲ್ಲವಾಗುತ್ತದೆ.