alex Certify ಕಚೇರಿಯಲ್ಲಿ ಪುರುಷ ಸಿಬ್ಬಂದಿ ಬೋಳು ತಲೆಯನ್ನು ಆಡಿಕೊಳ್ಳುವುದು ಲೈಂಗಿಕ ಅಪರಾಧಕ್ಕೆ ಸಮ – ಬ್ರಿಟನ್​ ಕೋರ್ಟ್ ಅಭಿಮತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚೇರಿಯಲ್ಲಿ ಪುರುಷ ಸಿಬ್ಬಂದಿ ಬೋಳು ತಲೆಯನ್ನು ಆಡಿಕೊಳ್ಳುವುದು ಲೈಂಗಿಕ ಅಪರಾಧಕ್ಕೆ ಸಮ – ಬ್ರಿಟನ್​ ಕೋರ್ಟ್ ಅಭಿಮತ

Employment Tribunal in UK holds calling man "bald" is sexual harassment

ಕಚೇರಿಗಳಲ್ಲಿ ಪುರುಷರನ್ನು ಬೋಳು ತಲೆ ಅಥವಾ ಬಕ್ಕ ತಲೆ ಎಂದು ಕರೆದರೆ ಅದು ಲೈಂಗಿಕ ಕಿರುಕುಳದ ಅಪರಾಧಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಇಂಗ್ಲೆಂಡ್​ನ ಉದ್ಯೋಗ ನ್ಯಾಯಮಂಡಳಿ ತಿಳಿಸಿದೆ.

ನ್ಯಾಯಾಧೀಶ ಜೋನಾಥನ್​ ಬ್ರೈನ್​ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠವು ಯಾರೊಬ್ಬರ ತಲೆಯ ಕೂದಲು ಕಡಿಮೆ ಎಂದು ಆಡಿಕೊಳ್ಳುವುದು ಅವಮಾನವೇ ಅಥವಾ ಕಿರುಕುಳವೇ ಎಂಬುದರ ಕುರಿತು ನಿರ್ಧಾರ ಕೈಗೊಳ್ಳಬೇಕಿತ್ತು.

ಬ್ರಿಟಿಷ್​​ ಬಂಗ್​ ಕಂಪನಿಯ ವಿರುದ್ಧ ಟೋನಿ ಫಿನ್​ ಎಂಬವರು ಲೈಂಗಿಕ ಕಿರುಕುಳದ ಕುರಿತು ಅರ್ಜಿ ಸಲ್ಲಿಸಿದ್ದರು. ವೆಸ್ಟ್​ ಯಾರ್ಕ್​ಷೈರ್​ ಮೂಲದ ಈ ಕಂಪನಿಯಿಂದ ಕಳೆದ ವರ್ಷ ಮೇ ತಿಂಗಳಲ್ಲಿ ವಜಾಗೊಳ್ಳುವ ಮುನ್ನ ಅವರು 24 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದರು.

ನಮ್ಮ ತೀರ್ಪಿನಲ್ಲಿ ಬೋಳು ತಲೆ ಎನ್ನುವುದು ಹೇಗೆ ಲೈಂಗಿಕತೆಯ ಕಿರುಕುಳದ ಜೊತೆ ಸಂಪರ್ಕವನ್ನು ಹೊಂದಿದೆ ಎಂಬುದನ್ನು ತಿಳಿಸಲಾಗಿದೆ ಎಂದು ನ್ಯಾಯಾಧೀಶ ಜೋನಾಥನ್​ ಬ್ರೈನ್​ ನೃತೃತ್ವದ ತ್ರಿ ಸದಸ್ಯ ಪೀಠ ಹೇಳಿದೆ.

ಬ್ರಿಟಿಷ್​ ಬಂಗ್​​ ಮ್ಯಾನುಫ್ಯಾಕ್ಚರಿಂಗ್​ ಕಂಪನಿ ಲಿಮಿಟೆಡ್​ ಪರವಾಗಿ ಹಾಜರಾದ ವಕೀಲ, ಪುರುಷ ಬೋಳು ತಲೆ ಇದ್ದುದನ್ನು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.

ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ಬೋಳು ತಲೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇಂದು ಲೈಂಗಿಕತೆಗೆ ಅಂತರ್ಗತವಾಗಿ ಸಂಬಂಧಿಸಿದೆ ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

ಈ ವಾರದ ಆರಂಭದಲ್ಲಿ ಫಿನ್‌ನ ಲೈಂಗಿಕ ಕಿರುಕುಳ, ಅನ್ಯಾಯದ ವಜಾ ಮತ್ತು ತಪ್ಪಾದ ವಜಾಗೊಳಿಸುವಿಕೆಯ ಹಕ್ಕುಗಳನ್ನು ಎತ್ತಿಹಿಡಿದ ನಂತರ ಅವರ ಪರಿಹಾರವನ್ನು ನಿರ್ಧರಿಸಲು ಭವಿಷ್ಯದ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.

ಜುಲೈ 2019ರಲ್ಲಿ ಕಾರ್ಖಾನೆಯ ಮೇಲ್ವಿಚಾರಕ ಜೇಮೀ ವಾದದ ಸಮಯದಲ್ಲಿ ಟೋನಿ ಫಿನ್​​​ರಿಗೆ ಬೋಳು ತಲೆ ಇದೆ ಎಂಬುದನ್ನು ಆಡಿಕೊಂಡಿದ್ದರು ಎನ್ನಲಾಗಿದೆ.

ಫಿನ್​ ನ್ಯಾಯಮಂಡಳಿಗೆ ನೀಡಿರುವ ಮಾಹಿತಿಯ ಪ್ರಕಾರ, ತಜ್ಞ ರಿಪೇರಿಗಾಗಿ ಕಾಯುತ್ತಿದ್ದ ಯಂತ್ರಗಳಲ್ಲಿ ಕೆಲಸ ಮಾಡುತ್ತಿದ್ದಾಗ ಕವರ್​ಗಳನ್ನು ತೆಗೆಯಲಾಗಿತ್ತು. ಇದನ್ನು ಜೇಮ ಕಿಂಗ್​ ಮಾಡಿದ್ದಾರೆ ಎಂಬುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ನಾನು ಅವರನ್ನು ಕೇಳಿದಾಗ ಅವರು ನನಗೆ ಬೋಳು ತಲೆಯ ಮುದುಕ ಎಂದು ಹೀಯಾಳಿಸಿದ್ದರು ಎಂದು ಟೋನಿ ಫಿನ್ ದೂರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...