ಕಚೇರಿಗಳಲ್ಲಿ ಪುರುಷರನ್ನು ಬೋಳು ತಲೆ ಅಥವಾ ಬಕ್ಕ ತಲೆ ಎಂದು ಕರೆದರೆ ಅದು ಲೈಂಗಿಕ ಕಿರುಕುಳದ ಅಪರಾಧಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಇಂಗ್ಲೆಂಡ್ನ ಉದ್ಯೋಗ ನ್ಯಾಯಮಂಡಳಿ ತಿಳಿಸಿದೆ.
ನ್ಯಾಯಾಧೀಶ ಜೋನಾಥನ್ ಬ್ರೈನ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠವು ಯಾರೊಬ್ಬರ ತಲೆಯ ಕೂದಲು ಕಡಿಮೆ ಎಂದು ಆಡಿಕೊಳ್ಳುವುದು ಅವಮಾನವೇ ಅಥವಾ ಕಿರುಕುಳವೇ ಎಂಬುದರ ಕುರಿತು ನಿರ್ಧಾರ ಕೈಗೊಳ್ಳಬೇಕಿತ್ತು.
ಬ್ರಿಟಿಷ್ ಬಂಗ್ ಕಂಪನಿಯ ವಿರುದ್ಧ ಟೋನಿ ಫಿನ್ ಎಂಬವರು ಲೈಂಗಿಕ ಕಿರುಕುಳದ ಕುರಿತು ಅರ್ಜಿ ಸಲ್ಲಿಸಿದ್ದರು. ವೆಸ್ಟ್ ಯಾರ್ಕ್ಷೈರ್ ಮೂಲದ ಈ ಕಂಪನಿಯಿಂದ ಕಳೆದ ವರ್ಷ ಮೇ ತಿಂಗಳಲ್ಲಿ ವಜಾಗೊಳ್ಳುವ ಮುನ್ನ ಅವರು 24 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದರು.
ನಮ್ಮ ತೀರ್ಪಿನಲ್ಲಿ ಬೋಳು ತಲೆ ಎನ್ನುವುದು ಹೇಗೆ ಲೈಂಗಿಕತೆಯ ಕಿರುಕುಳದ ಜೊತೆ ಸಂಪರ್ಕವನ್ನು ಹೊಂದಿದೆ ಎಂಬುದನ್ನು ತಿಳಿಸಲಾಗಿದೆ ಎಂದು ನ್ಯಾಯಾಧೀಶ ಜೋನಾಥನ್ ಬ್ರೈನ್ ನೃತೃತ್ವದ ತ್ರಿ ಸದಸ್ಯ ಪೀಠ ಹೇಳಿದೆ.
ಬ್ರಿಟಿಷ್ ಬಂಗ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಲಿಮಿಟೆಡ್ ಪರವಾಗಿ ಹಾಜರಾದ ವಕೀಲ, ಪುರುಷ ಬೋಳು ತಲೆ ಇದ್ದುದನ್ನು ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.
ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ಬೋಳು ತಲೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇಂದು ಲೈಂಗಿಕತೆಗೆ ಅಂತರ್ಗತವಾಗಿ ಸಂಬಂಧಿಸಿದೆ ಎಂದು ತೀರ್ಪಿನಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.
ಈ ವಾರದ ಆರಂಭದಲ್ಲಿ ಫಿನ್‌ನ ಲೈಂಗಿಕ ಕಿರುಕುಳ, ಅನ್ಯಾಯದ ವಜಾ ಮತ್ತು ತಪ್ಪಾದ ವಜಾಗೊಳಿಸುವಿಕೆಯ ಹಕ್ಕುಗಳನ್ನು ಎತ್ತಿಹಿಡಿದ ನಂತರ ಅವರ ಪರಿಹಾರವನ್ನು ನಿರ್ಧರಿಸಲು ಭವಿಷ್ಯದ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ.
ಜುಲೈ 2019ರಲ್ಲಿ ಕಾರ್ಖಾನೆಯ ಮೇಲ್ವಿಚಾರಕ ಜೇಮೀ ವಾದದ ಸಮಯದಲ್ಲಿ ಟೋನಿ ಫಿನ್ರಿಗೆ ಬೋಳು ತಲೆ ಇದೆ ಎಂಬುದನ್ನು ಆಡಿಕೊಂಡಿದ್ದರು ಎನ್ನಲಾಗಿದೆ.
ಫಿನ್ ನ್ಯಾಯಮಂಡಳಿಗೆ ನೀಡಿರುವ ಮಾಹಿತಿಯ ಪ್ರಕಾರ, ತಜ್ಞ ರಿಪೇರಿಗಾಗಿ ಕಾಯುತ್ತಿದ್ದ ಯಂತ್ರಗಳಲ್ಲಿ ಕೆಲಸ ಮಾಡುತ್ತಿದ್ದಾಗ ಕವರ್ಗಳನ್ನು ತೆಗೆಯಲಾಗಿತ್ತು. ಇದನ್ನು ಜೇಮ ಕಿಂಗ್ ಮಾಡಿದ್ದಾರೆ ಎಂಬುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ನಾನು ಅವರನ್ನು ಕೇಳಿದಾಗ ಅವರು ನನಗೆ ಬೋಳು ತಲೆಯ ಮುದುಕ ಎಂದು ಹೀಯಾಳಿಸಿದ್ದರು ಎಂದು ಟೋನಿ ಫಿನ್ ದೂರಿದ್ದರು.