‘ಕಚಾ ಬಾದಾಮ್’ನ ರಂಜಾನ್ ಆವೃತ್ತಿ ಹಾಡು ರಚಿಸಿದ ಪಾಕ್ ಗಾಯಕ: ಟ್ವಿಟ್ಟರ್ ತುಂಬಾ ಮೀಮ್‍ಗಳ ಸುರಿಮಳೆ 12-04-2022 6:58AM IST / No Comments / Posted In: Featured News, Live News, Entertainment ವೈರಲ್ ಆಗಿರುವ ಕಚಾ ಬಾದಮ್ ಕ್ರೇಜ್ ಇಂಟರ್ನೆಟ್‌ನಲ್ಲಿ ಇನ್ನೂ ಕಡಿಮೆಯಾದಂತಿಲ್ಲ. ಜನರು ಅದರ ಬೀಟ್‌ಗಳಿಗೆ ಹೆಜ್ಜೆ ಹಾಕುತ್ತಾರೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಬಹುತೇಕರು ಈ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಈ ಹಾಡು ತನ್ನದೇ ಆದ ಕ್ರೇಜ್ ಸೃಷ್ಟಿಸಿದೆ. ಈ ಹಾಡಿನ ಸ್ಫೂರ್ತಿಯಿಂದ, ಕಚಾ ಬಾದಮ್ ಎಂಬ ವೈರಲ್ ಹಾಡಿನ ರಂಜಾನ್ ಆವೃತ್ತಿ ಪಾಕಿಸ್ತಾನದಲ್ಲಿ ಟ್ರೆಂಡ್ ಆಗಿದೆ. ಕಚಾ ಬಾದಾಮ್ ನ ಮ್ಯೂಸಿಕ್ ಅನ್ನು ಬಳಸಿ ಈ ರಂಜಾನ್ ಆವೃತ್ತಿಯ ಹಾಡನ್ನು ಹಾಡಲಾಗಿದೆ. ಚಮತ್ಕಾರಿ ವೈರಲ್ ವಿಡಿಯೋಗಳಿಗೆ ಹೆಸರುವಾಸಿಯಾದ ಪಾಕಿಸ್ತಾನದ ಯೂಟ್ಯೂಬರ್ ಯಾಸಿರ್ ಶೋಹರ್ವಾಡಿ ಅವರು ಈ ಹಾಡನ್ನು ಹಾಡಿದ್ದಾರೆ. ಶೋಹರ್ವಾಡಿ ಅವರ ರೋಜಾ ರಖುಂಗಾ ಎಂಬ ಶೀರ್ಷಿಕೆಯ ಹಾಡಿನ ಆವೃತ್ತಿಯು, ಇದೀಗ ಟ್ವಿಟ್ಟರ್‌ನಲ್ಲಿ ಮೀಮ್‌ಗಳು ಮತ್ತು ಟ್ರೋಲ್‌ಗಳಿಂದ ತುಂಬಿವೆ. ಹಾಡಿನಲ್ಲಿ ಪ್ರಾಣಿಗಳ ಧ್ವನಿಯನ್ನು ಅನುಕರಿಸಿದ್ದಕ್ಕಾಗಿ ಒಂದು ವರ್ಗದ ಜನರು ಅವರನ್ನು ಅಪಹಾಸ್ಯ ಮಾಡಿದರೆ, ಇತರರು ತಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಗಾಯಕನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚಾ ಬಾದಾಮ್ ನ ಹಲಾಲ್ ಆವೃತ್ತಿ ಬಂದಿದೆ ಅಂತೆಲ್ಲಾ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ತಮ್ಮ ಹಾಡಿಗೆ ಪವಿತ್ರ ರಂಜಾನ್ ತಿಂಗಳನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಬಹುತೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮನನೊಂದಿದ್ದಾಗಿ ಹೇಳಿದ್ದಾರೆ. My man is back with a banger 🤡🙊 pic.twitter.com/9bh8ues4Yh — KT (@Kinnzayyy) April 7, 2022 Meow, kaacha badaam, cats and mynah birds, the beard of an unhinged sociopath. Man's covered it all. https://t.co/jp8oh2sFQ6 — Товарищ Зил-и-Илахй 🇵🇸 (@XilleIlahi) April 9, 2022 My man is back with a banger 🤡🙊 pic.twitter.com/9bh8ues4Yh — KT (@Kinnzayyy) April 7, 2022