alex Certify ಕಚಾ ಬಾದಮ್ ಹಾಡಿಗೆ ಕುಣಿದು ಕುಪ್ಪಳಿಸಿದ ಇಂಟರ್ನೆಟ್ ಸೆನ್ಸೇಷನ್ ತಾಂಜೇನಿಯಾದ ಅಣ್ಣ-ತಂಗಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚಾ ಬಾದಮ್ ಹಾಡಿಗೆ ಕುಣಿದು ಕುಪ್ಪಳಿಸಿದ ಇಂಟರ್ನೆಟ್ ಸೆನ್ಸೇಷನ್ ತಾಂಜೇನಿಯಾದ ಅಣ್ಣ-ತಂಗಿ: ವಿಡಿಯೋ ವೈರಲ್

ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ ತಮ್ಮ ಕಡಲೆಕಾಯಿಯನ್ನು ಮಾರಾಟ ಮಾಡಲು ಸೂಪರ್ ಕ್ಯಾಚಿ ಹಾಡನ್ನು ರಚಿಸಿ ಹಾಡಿದ್ದು, ಖ್ಯಾತರಾಗಿದ್ದಾರೆ. ಇವರ ಕಚಾ ಬಾದಾಮ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳವರೆಗೆ ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಭಾರತವಷ್ಟೇ ಅಲ್ಲ, ಈ ಹಾಡು ಪ್ರಪಂಚದಾದ್ಯಂತ ಜನರನ್ನು ಆಕರ್ಷಿಸಿದೆ.

ಕೊರಿಯಾದ ತಾಯಿ-ಮಗಳು ಈ ಹಾಡಿಗೆ ನೃತ್ಯ ಮಾಡಿರುವ ವಿಡಿಯೋದಿಂದ ಪೋರ್ಚುಗೀಸ್ ನ ತಂದೆ-ಮಗಳು ಮತ್ತು ಯುಎಸ್ ನ ರಿಕಿ ಪಾಂಡ್ ವರೆಗೆ ಎಲ್ಲರ ಮನಗೆದ್ದಿದೆ. ಇದೀಗ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಹಾಗೂ ಅವರ ಸಹೋದರಿ ಈ ವೈರಲ್ ಹಾಡಿಗೆ ನೃತ್ಯ ಮಾಡಿದ್ದಾರೆ. ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಹಾಗೂ ನೃತ್ಯ ಮಾಡುವ ಮೂಲಕ ಕಿಲಿ ಪೌಲ್ ಇಂಟರ್ನೆಟ್ ನಲ್ಲಿ ವೈರಲ್ ಸೆನ್ಸೇಷನ್ ಆಗಿದ್ದಾರೆ.

ಹೊಸ ವೀಡಿಯೊದಲ್ಲಿ , ಕಿಲಿ ಪೌಲ್ ತನ್ನ ಸಹೋದರಿ ನೀಮಾ ಜೊತೆಗೆ ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಹಾಡನ್ನು ಆನಂದಿಸುತ್ತಾ ಈ ಸಹೋದರ-ಸಹೋದರಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, 5.3 ಲಕ್ಷಕ್ಕೂ ಹೆಚ್ಚು ಲೈಕ್‌ಗಳೊಂದಿಗೆ ಭಾರಿ ಸದ್ದು ಮಾಡಿದೆ. ಇವರಿಬ್ಬರ ನೃತ್ಯ ಕೌಶಲ್ಯಕ್ಕೆ ಭಾರತೀಯರು ಬೆರಗಾಗಿದ್ದಾರೆ. ಕಾಮೆಂಟ್‌ ವಿಭಾಗವನ್ನು ಪ್ರೀತಿ ಹಾಗೂ ಹೃದಯದ ಎಮೋಜಿಗಳೊಂದಿಗೆ ತುಂಬಿದ್ದಾರೆ.

https://youtu.be/gzPFV_4t_Ag

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...