ಈಗಿನ ಜಮಾನದಲ್ಲಿ ಉದ್ಯೋಗವನ್ನು ಹುಡುಕೋದು ಅಂದರೆ ಕಷ್ಟಕರ ಕೆಲಸವೇ ಸರಿ. ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕದ ಬಳಿಕ ಕೆಲಸ ಸಿಗೋದೇ ಒಂದು ಕಷ್ಟವಾಗಿದೆ.
ಆದರೆ ಈ ಸಮಸ್ಯೆಯಿಂದ ಪಾರಾಗಲು ಇಲ್ಲೊಬ್ಬ ವ್ಯಕ್ತಿ ವಿನೂತನ ಉಪಾಯವೊಂದನ್ನು ಮಾಡಿದ್ದಾರೆ. ಟ್ವಿಟರ್ ಬಳಕೆದಾರರಾದ ಅಮನ್ ಖಂಡೇಲ್ವಾಲ್ ಎಂಬವರು ಜೊಮ್ಯಾಟೋ ಡೆಲಿವರಿ ಬಾಯ್ ಆಗುವ ಮೂಲಕ ವಿವಿಧ ಕಂಪನಿಗಳನ್ನು ಆಕರ್ಷಿಸಲು ಮುಂದಾಗಿದ್ದಾರೆ.
ಬೆಂಗಳೂರಿನ ಹಲವಾರು ಸ್ಟಾರ್ಟಪ್ ಕಂಪನಿಗಳಿಗೆ ಪೇಸ್ಟ್ರಿಗಳ ಬಾಕ್ಸ್ನ ಜೊತೆಯಲ್ಲಿ ತಮ್ಮ ರೆಸ್ಯೂಮ್ನ್ನೂ ಇರಿಸಿ ಕಳಿಸಿದ್ದಾರೆ. ಈ ವಿಚಾರವನ್ನು ಟ್ವಿಟರ್ನಲ್ಲಿ ಶೇರ್ ಮಾಡಿರುವ ಅಮನ್, ನನಗೆ ಬಹುತೇಕ ರೆಸ್ಯೂಮ್ಗಳು ಕಸದ ಬುಟ್ಟಿ ಸೇರುತ್ತದೆ. ಆದರೆ ನಿಮ್ಮ ಹೊಟ್ಟೆಯಲ್ಲಿ ನನ್ನ ರೆಸ್ಯೂಮ್ ಎಂದು ಶೀರ್ಷಿಕೆ ನೀಡಿದ್ದಾರೆ.
ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ನಾನು ಪೇಸ್ಟ್ರಿ ಬಾಕ್ಸ್ನಲ್ಲಿ ನನ್ನ ರೆಸ್ಯೂಮ್ಗಳನ್ನು ಕಳಿಸಿದ್ದೇನೆ. ಬೆಂಗಳೂರಿನ ಸಾಕಷ್ಟು ಸ್ಟಾರ್ಟಪ್ ಕಂಪನಿಗಳಿಗೆ ಇದನ್ನು ತಲುಪಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಅಮನ್ ಉದ್ಯೋಗದಾತರ ಗಮನ ಸೆಳೆದಿರೋದು ಮಾತ್ರವಲ್ಲದೇ ನೆಟ್ಟಿಗರ ಗಮನವನ್ನೂ ಸೆಳೆದಿದ್ದಾರೆ. ಇವರ ಟ್ವೀಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
https://twitter.com/AmanKhandelwall/status/1543203379501236226?s=20&t=5WzKcPDIp9xx0dIEktPLoA