ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್ ಮತ್ತು ದಕ್ಷಿಣ ಆಫ್ರಿಕಾದ ಸ್ಟೆಲೆನ್ ಬೋಶ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಓಮಿಕ್ರಾನ್ ದ ಭಯಾನಕತೆ ಬಿಚ್ಚಿಡಲಾಗಿದೆ.
ಈ ಅಧ್ಯಯನದಲ್ಲಿ ಮುಂದಿನ ದಿನಗಳಲ್ಲಿ ಯುಕೆನಲ್ಲಿ ರೂಪಾಂತರ ಓಮಿಕ್ರಾನ್ ಹಾವಳಿ ಹೆಚ್ಚಾಗಬಹುದು. ಅಲ್ಲದೇ, ಮುಂದಿನ ಏಪ್ರಿಲ್ ಒಳಗಾಗಿ 25 ಸಾವಿರದಿಂದ 75 ಸಾವಿರದಷ್ಟು ಜನರು ಇದಕ್ಕೆ ಬಲಿಯಾಗಬಹುದು ಎಂದು ಅಧ್ಯಯನ ಹೇಳಿದೆ.
ಯುಕೆನಲ್ಲಿ ಶನಿವಾರ ಒಂದೇ ದಿನ 600ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ, ಈ ಸೋಂಕು ಸೌಮ್ಯ ರೋಗ ಉಂಟು ಮಾಡುತ್ತಿದೆ. ಗಂಭೀರ ಪರಿಣಾಮ ಇದುವರೆಗೂ ದಾಖಲಾಗಿಲ್ಲ. ಆದರೂ ಇದರ ಬಗ್ಗೆ ಆತಂಕ ಮಾತ್ರ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಸದ್ಯ ಯುರೋಪ್ ಭಾಗಗಳಲ್ಲಿ ಇದರ ಹರಡುವಿಕೆಯ ತೀವ್ರತೆ ಹೆಚ್ಚಾಗುತ್ತಿದ್ದು, ಮೈಮರೆತರೆ ಇದರ ಸ್ಥಿತಿ ಗಂಭೀರವಾಗಬಹುದು ಎಂದು ಅಧ್ಯಯನ ಸಂಶಯ ವ್ಯಕ್ತಪಡಿಸಿದೆ.