alex Certify ಓಮಿಕ್ರಾನ್​ ರೂಪಾಂತರದಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ಅಧ್ಯಯನದಲ್ಲಿ ಅಘಾತಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಮಿಕ್ರಾನ್​ ರೂಪಾಂತರದಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ಅಧ್ಯಯನದಲ್ಲಿ ಅಘಾತಕಾರಿ ಮಾಹಿತಿ ಬಹಿರಂಗ

ಕೊಲೊರಾಡೋ ವಿಶ್ವವಿದ್ಯಾನಿಲಯ, ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವು ಕೊರೊನವೈರಸ್ ರೂಪಾಂತರದ ಒಮಿಕ್ರಾನ್ ಇತರ ಯಾವುದೇ ರೂಪಾಂತರಗಳಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಮೇಲ್ಭಾಗದ ಅಪ್ಪರ್​ ಏರ್​ ವೇ ಸೋಂಕನ್ನು (ಯುಎಐ) ಉಂಟುಮಾಡುತ್ತದೆ ಎಂದು ಬಹಿರಂಗಪಡಿಸಿದೆ. ಇದರಿಂದ ಹೃದಯಾಘಾತದ ಅಪಾಯ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ.

ಕೋವಿಡ್-19 ನೊಂದಿಗೆ ಆಸ್ಪತ್ರೆಗೆ ದಾಖಲಾದ 19 ವರ್ಷದೊಳಗಿನ 18,849 ಮಕ್ಕಳಿಗೆ ಸಂಬಂಧಿಸಿದ ರಾಷ್ಟ್ರೀಯ ಕೋವಿಡ್ ಕೋಹಾರ್ಟ್ ಸಹಯೋಗದಿಂದ ದಾಖಲೆಗಳನ್ನು ವಿಶ್ಲೇಷಿಸುವ ಮೂಲಕ ಅಧ್ಯಯನವನ್ನು ನಡೆಸಲಾಯಿತು.ಈ ಅಧ್ಯಯನವನ್ನು ಕಳೆದ ವಾರ JAMA ಪೀಡಿಯಾಟ್ರಿಕ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಓಮಿಕ್ರಾನ್ ರೂಪಾಂತರವು ಕಿರಿಯ ಮಕ್ಕಳಲ್ಲಿ ಮೇಲಿನ ಅಪ್ಪರ್​ ಏರ್​ ವೇ ಸೋಂಕನ್ನು (UAI) ಉಂಟುಮಾಡುವ ಸಾಧ್ಯತೆಯಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಅಮೆರಿಕದಲ್ಲಿ ಓಮಿಕ್ರಾನ್​​ನಿಂದ ಮಕ್ಕಳಲ್ಲಿ ಯುಎಐ ಪ್ರಕರಣಗಳು ಹೆಚ್ಚುತ್ತಿವೆಯೇ ಎಂದು ತಿಳಿದುಕೊಳ್ಳಲು ಸಂಶೋಧಕರು ಈ ಅಧ್ಯಯನವನ್ನು ನಡೆಸಿದರು.

ಕೋವಿಡ್​ 19 ಹಾಗೂ ಯುಎಐ ಎರಡರಿಂದಲೂ ಆಸ್ಪತ್ರೆಗೆ ದಾಖಲಾದ 21.1 ಪ್ರತಿಶತ ಮಕ್ಕಳು ತೀವ್ರವಾದ ಲಕ್ಷಣಗಳನ್ನು ಅನುಭವಿಸಿದ್ದಾರೆ. ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರ ಉಸಿರಾಟ ಸರಾಗಗೊಳಿಸಲು ಶ್ವಾಸಕೋಶಕ್ಕೆ ಟ್ಯೂಬ್​ನ್ನು ಸೇರಿಸಲಾಗುತ್ತದೆ.

“ತೀವ್ರವಾದ UAI ಹೊಂದಿರುವ ಮಕ್ಕಳು ಶ್ವಾಸನಾಳದ ಅಡಚಣೆಯಿಂದ ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ. ಅವರಿಗೆ ನೆಬ್ಯುಲೈಸ್ಡ್ ರೇಸ್ಮಿಕ್ ಎಪಿನ್ಫ್ರಿನ್, ಹೀಲಿಯಂ-ಆಮ್ಲಜನಕ ಮಿಶ್ರಣಗಳು ಮತ್ತು ಇಂಟ್ಯೂಬೇಶನ್​ ಸೇರಿದಂತೆ ತೀವ್ರ ನಿಗಾ ಘಟಕದಲ್ಲಿನ ಚಿಕಿತ್ಸೆಯ ಅಗತ್ಯ ಬೀಳಬಹುದು ಎಂದು ಅಧ್ಯಯನವು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...