alex Certify ಓಮದ ಕಷಾಯದ ಈ ಅದ್ಭುತ ಪ್ರಯೋಜಗಳ ಬಗ್ಗೆ ತಿಳಿದಿರಲಿ ನಿಮಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಮದ ಕಷಾಯದ ಈ ಅದ್ಭುತ ಪ್ರಯೋಜಗಳ ಬಗ್ಗೆ ತಿಳಿದಿರಲಿ ನಿಮಗೆ

ಓಮದಿಂದ ಆರೋಗ್ಯಕ್ಕೆ ಇರುವ ಸಾಕಷ್ಟು ಪ್ರಯೋಜನಗಳು ನಿಮಗೆ ಗೊತ್ತೇ ಇದೆ. ಅದೇ ರೀತಿ ಓಮದ ಕಷಾಯ ಕೂಡ ನಮ್ಮನ್ನು ಆರೋಗ್ಯವಾಗಿಡುವಲ್ಲಿ ಸಹಕರಿಸುತ್ತದೆ. ಪ್ರತಿ ಅಡುಗೆಮನೆಯಲ್ಲಿಯೂ ಓಮ ಇದ್ದೇ ಇರುತ್ತದೆ. ಸುಲಭವಾಗಿ ಸಿಗುವಂಥ ಮಸಾಲೆ ಪದಾರ್ಥ ಇದು.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ನೀವು ಓಮದ ಕಷಾಯ ಸೇವನೆಯನ್ನು ಆರಂಭಿಸಿ. ಓಮ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ತೂಕ ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.

ಓಮದಲ್ಲಿ ಪ್ರೋಟೀನ್, ಕೊಬ್ಬು, ಖನಿಜಗಳು, ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣಾಂಶಗಳೂ ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ನೀವು ಖಾಲಿ ಹೊಟ್ಟೆಯಲ್ಲಿ ಓಮದ ಕಷಾಯ ಕುಡಿಯಬೇಕು. ಹೀಗೆ ಮಾಡಿದರೆ ಉದರ ಶೂಲೆಯನ್ನು ಹೋಗಲಾಡಿಸಬಹುದು.

ನಿಮಗೆ ಯಾವುದೇ ರೀತಿಯ ಹೊಟ್ಟೆನೋವಿನ ಸಮಸ್ಯೆ ಇದ್ದರೆ ಓಮದ ಕಷಾಯ ಕುಡಿಯುವುದರಿಂದ ಅದು ನಿವಾರಣೆಯಾಗುತ್ತದೆ.  ಇದಲ್ಲದೇ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಕೂಡ ಓಮ ರಾಮಬಾಣವಿದ್ದಂತೆ. ಊಟಕ್ಕೂ ಅರ್ಧಗಂಟೆ ಮೊದಲು ಓಮದ ಕಷಾಯ ಸೇವಿಸಿದರೆ ಗ್ಯಾಸ್‌ ನಿವಾರಣೆಯಾಗುತ್ತದೆ. ಹೆಣ್ಣು ಮಕ್ಕಳಿಗೂ ಓಮದ ಕಷಾಯ ತುಂಬಾ ಪ್ರಯೋಜನಕಾರಿ. ಮುಟ್ಟಿನ ನೋವು ಇದ್ದಾಗ ಈ ಕಷಾಯ ಸೇವನೆ ಮಾಡುವುದು ಉತ್ತಮ.

ಇದಲ್ಲದೆ ಮೂತ್ರದ ಸೋಂಕನ್ನು ಕೂಡ ನಿವಾರಿಸುತ್ತದೆ. ಯಾವುದೇ ರೀತಿಯ ಗಂಟಲಿನ ಸಮಸ್ಯೆ ಇದ್ದರೆ ಓಮದ ಕಷಾಯ ಮಾಡುಕೊಂಡು ಕುಡಿಯಿರಿ. ಬಾಯಿ ದುರ್ವಾಸನೆಯ ಸಮಸ್ಯೆ ಇರುವವರು ಕೂಡ ಈ ಕಷಾಯವನ್ನು ಕುಡಿದರೆ ಉತ್ತಮ ಪರಿಣಾಮ ಗೋಚರಿಸುತ್ತದೆ. ಓಮದ ಕಷಾಯ ಸೇವನೆಯಿಂದ ಚಯಾಪಚಯ ಕ್ರಿಯೆ ಸುಲಭವಾಗುತ್ತದೆ. ಪರಿಣಾಮ ತೂಕ ಸಹ ಇಳಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...