alex Certify ಓದಿರುವ ನಾನು ಈ ಅನಕ್ಷರಸ್ಥನನ್ನು ಹೇಗೆ ವಿವಾಹವಾಗಲಿ..? ಮಂಟಪದಲ್ಲೇ ಈ ಪ್ರಶ್ನೆಯೆತ್ತಿ ಮದುವೆ ನಿರಾಕರಿಸಿದ ವಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓದಿರುವ ನಾನು ಈ ಅನಕ್ಷರಸ್ಥನನ್ನು ಹೇಗೆ ವಿವಾಹವಾಗಲಿ..? ಮಂಟಪದಲ್ಲೇ ಈ ಪ್ರಶ್ನೆಯೆತ್ತಿ ಮದುವೆ ನಿರಾಕರಿಸಿದ ವಧು

Bride calls off weddingಇನ್ನೇನು ವರ, ವಧುವಿಗೆ ತಾಳಿ ಕಟ್ಟಬೇಕು ಎಂದಾದಾಗ ಮದುವೆಗಳು ಮುರಿದು ಬಿದ್ದಂತಹ ಸನ್ನಿವೇಶಗಳನ್ನು ಕೇವಲ ಸಿನಿಮಾ, ಧಾರಾವಾಹಿಯಲ್ಲಿ ಮಾತ್ರ ನೋಡಲಾಗುತ್ತಿತ್ತು. ಇದೀಗ, ಇತ್ತೀಚೆಗಿನ ಭಾರತೀಯ ಮದುವೆ ಸಮಾರಂಭದಲ್ಲಿ ಹಾರ ಬದಲಾಯಿಸುವ ವೇಳೆ ಮದುವೆ ನಿಂತು ಹೋಗುವ ಘಟನೆಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಇದೀಗ, ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

ತನ್ನ ವರ ವಿದ್ಯಾಭ್ಯಾಸ ಪಡೆದಿಲ್ಲ, ಆತ ಅನಕ್ಷರಸ್ಥ ಎಂದು ತಿಳಿದ ವಧುವೊಬ್ಬಳು ಮದುವೆಯನ್ನು ಮೊಟಕುಗೊಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿವಾಹದ ವೇದಿಕೆಯಲ್ಲಿ ನಿಂತಿದ್ದ ವರ, ವಧುವಿಗೆ ಹಾರ ಹಾಕಿದ್ದಾನೆ. ಆದರೆ, ವಧು ಮಾತ್ರ ಆತನಿಗೆ ಹಾರ ಹಾಕಲು ನಿರಾಕರಿಸಿದ್ದಾಳೆ.

ವಧುವನ್ನು ವಿವಾಹವಾಗುವಂತೆ ಮನವೊಲಿಸಲು ಪ್ರಯತ್ನಿಸಿದಾಗ, ಆಕೆ ಒಲ್ಲೆ ಎಂದಿದ್ದಾಳೆ. ತಾನು ಬಿ.ಎಡ್ ವ್ಯಾಸಂಗ ಮಾಡುತ್ತಿದ್ದು, ತನ್ನೊಂದಿಗೆ ಇಂಗ್ಲೀಷ್‌ನಲ್ಲಿ ಮಾತನಾಡಬಲ್ಲ ವ್ಯಕ್ತಿಯನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ್ದಾಳೆ.

ತಾನು ವಿದ್ಯಾವಂತೆಯಾಗಿದ್ದು ಬಿ.ಎಡ್ ಓದುತ್ತಿದ್ದೇನೆ. ಅವನು ಸಂಪೂರ್ಣವಾಗಿ ಅನಕ್ಷರಸ್ಥನಾಗಿದ್ದಾನೆ. ತಾನು ಅವನೊಂದಿಗೆ ಸಂತೋಷವಾಗಿರಬಹುದೇ? ತಾನು ಅವನನ್ನು ಮದುವೆಯಾಗಲಾರೆ ಎಂದು ವಧು ಹೇಳಿದ್ದಾಳೆ.

ವಧುವಿನ ಈ ಮಾತುಗಳನ್ನು ಕೇಳಿದ ನಂತರ ವ್ಯಕ್ತಿಯೊಬ್ಬರು ಆಕೆಯನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮೊದಲೇ ಯಾಕೆ ಮದುವೆಯಾಗಲು ನಿರಾಕರಿಸಲಿಲ್ಲ ಎಂದು ಕೇಳಿದ್ದಾರೆ. ಆಕೆಯ ತಂದೆ ಹಣದ ಆಸೆಗಾಗಿ ಆ ವ್ಯಕ್ತಿಯನ್ನು ಮದುವೆಯಾಗಲು ಒತ್ತಾಯಿಸಿದ್ದಾಗಿ ವಧು ಉತ್ತರಿಸಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...