ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿ. ಹೆಚ್ಚಾಗಿ ಹಬ್ಬ ಹಾಗೂ ವಿಶೇಷ ದಿನದಂದು ತಯಾರಿಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆ.
ಬೇಕಾಗುವ ಸಾಮಾಗ್ರಿಗಳು : ಓಟ್ಸ್ ಅರ್ಧ ಬಟ್ಟಲು, ಕಡಲೆ ಬೇಳೆ ನೆನೆಸಿದ್ದು ಕಾಲು ಬಟ್ಟಲು, ಬೆಲ್ಲ ಅರ್ಧ ಬಟ್ಟಲು, ಹಸಿ ತೆಂಗಿನ ತುರಿ ಅರ್ಧ ಬಟ್ಟಲು, ತುಪ್ಪ ಎರಡು ದೊಡ್ಡ ಚಮಚ, ಗೋಡಂಬಿ-ದ್ರಾಕ್ಷಿ ತುಪ್ಪದಲ್ಲಿ ಹುರಿದದ್ದು, ಏಲಕ್ಕಿ ಪುಡಿ ಸ್ವಲ್ಪ, ಪಚ್ಚ ಕರ್ಪೂರ ಚಿಟಿಕೆ.
ಮಾಡುವ ವಿಧಾನ : ಬಾಣಲೆಯಲ್ಲಿ 1 ಟೇಬಲ್ ಸ್ಪೂನ್ ತುಪ್ಪ ಬಿಸಿ ಮಾಡಿ ಓಟ್ಸ್ ಅನ್ನು ಹದವಾಗಿ ಹುರಿಯಿರಿ. ಕುಕ್ಕರ್ ನಲ್ಲಿ ಓಟ್ಸ್, ಕಡಲೆ ಬೇಳೆ 2 ಬಟ್ಟಲು ನೀರು ಸೇರಿಸಿ 3 ಸೀಟಿ ಕೂಗಿಸಿ. ತಣ್ಣಗಾದ ನಂತರ ಬೆಲ್ಲ, ಏಲಕ್ಕಿ ಪುಡಿ, ಪಚ್ಚ ಕರ್ಪೂರ, ಮಿಕ್ಕ ತುಪ್ಪ ಸೇರಿಸಿ ಹದವಾಗಿ ಬೇಯಿಸಿ.
ನಂತರ ಅರ್ಧ ಬಟ್ಟಲು ಹಾಲನ್ನು ಸೇರಿಸಿ ಕುದಿಸಿ. ಅಲಂಕಾರಕ್ಕೆ ಪಿಸ್ತಾ ಹಾಗೂ ಓಟ್ಸ್ ಚೂರನ್ನು ಹಾಕಿ. ಈಗ ಓಟ್ಸ್ ಹಾಗೂ ಕಡಲೆ ಬೇಳೆ ಪಾಯಸ ಸವಿಯಲು ಸಿದ್ಧ.