ಉಕ್ರೇನ್ನ ಮೇಲೆ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 350ಕ್ಕೂ ಅಧಿಕ ನಾಗರಿಕರು ಬಲಿಯಾಗಿದ್ದಾರೆ. ಇತ್ತೀಚಿಗೆ ರಿಲೀಸ್ ಮಾಡಲಾದ ಉಪಗ್ರಹ ಚಿತ್ರಗಳಲ್ಲಿ ಕೈವ್ನಲ್ಲಿ 40 ಮೈಲಿ ಉದ್ದದ ಬೆಂಗಾವಲು ಪಡೆ ಇರುವುದು ಬಹಿರಂಗಪಟ್ಟಿದೆ.
ಜರ್ಮನಿ, ಅಮೆರಿಕ. ಆಸ್ಟ್ರೇಲಿಯಾ ಹಾಗೂ ಕೆನಡಾದಂತಹ ಹಲವಾರು ರಾಷ್ಟ್ರಗಳು ಉಕ್ರೇನ್ಗೆ ಮಿಲಿಟರಿ ಬೆಂಬಲವನ್ನು ಕಳುಹಿಸಲು ನಿರ್ಧರಿಸಿವೆ. ಈ ನಡುವೆ ಸೋಮವಾರದಂದು ನಡೆದ UNHRC ಸಭೆಯಲ್ಲಿ ಭಾರತವು ಮತ್ತೊಮ್ಮೆ ಮತದಾನದಿಂದ ದೂರವುಳಿದಿದೆ.
ಟರ್ಕಿಯ ಮಾಧ್ಯಮವೊಂದು ನೀಡಿರುವ ವರದಿಯ ಪ್ರಕಾರ, ಖಾರ್ಕಿವ್ ಹಾಗೂ ಕೀವ್ ನಡುವಿನ ನಗರದ ಓಖ್ತಿರ್ಕಾದಲ್ಲಿ ರಷ್ಯಾದ ಫಿರಂಗಿ ದಳವು ಮಿಲಿಟರಿ ನೆಲೆ ಮೇಲೆ ದಾಳಿ ಬಳಿಕ 70ಕ್ಕೂ ಅಧಿಕ ಉಕ್ರೇನ್ನ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಗೊಳಗಾದ ಓಖ್ತಿರ್ಕಾ ನಗರವು ಉಕ್ರೇನ್ನ ರಾಜಧಾನಿ ಕೈವ್ನಿಂದ 345 ಕಿಲೋಮೀಟರ್ ದೂರದಲ್ಲಿದೆ.