
ಭಾರತದಲ್ಲಿ ಹಬ್ಬದ ಋತುವಾಗಿದ್ದು, ಗ್ರಾಹಕರನ್ನು ಆಕರ್ಷಿಸಲು ರಿಯಾಯಿತಿ ಮತ್ತು ಆಫರ್ಗಳ ಸುರಿಮಳೆಯೇ ಪ್ರಕಟವಾಗಿದೆ. ಗ್ರಾಹಕರು ಉತ್ತಮ ಆಫರ್ ಲಾಭ ಪಡೆಯಲು ಶಾಪಿಂಗ್ ವೆಬ್ಸೈಟ್ ಗಳಲ್ಲಿ ಸರ್ಚಿಂಗ್ ನಡೆಸಿದ್ದಾರೆ.
ಇದೇ ವೇಳೆ ಇಲ್ಲೊಬ್ಬ ವ್ಯಕ್ತಿಯು ತಾನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಮೊಬೈಲ್ ಫೋನ್ನ ಅಪ್ಡೇಟೆಡ್ ಎಡಿಷನ್ ಪಡೆಯುವ ಅದೃಷ್ಟಶಾಲಿಯಾಗಿದ್ದರು. ಐಫೋನ್ 13 ರ ಬದಲಿಗೆ ಐಫೋನ್ 14 ಅನ್ನು ಸ್ವೀಕರಿಸಿದ್ದಾರೆ. ಅವರಿಗೆ ಅದೃಷ್ಟ ಒಲಿದುಬಂದಿದೆ.
ಟ್ವಿಟರ್ ಬಳಕೆದಾರ ಅಶ್ವಿನ್ ಹೆಗ್ಡೆ ಅವರು ತಮ್ಮ ಫಾಲೋಯರ್ ಫ್ಲಿಪ್ಕಾರ್ಟ್ನಿಂದ ಐಫೋನ್-13 ಆರ್ಡರ್ ಮಾಡಿದ್ದಾರೆ. ಆದರೆ ಬದಲಿಗೆ ಐಫೋನ್-14 ಅನ್ನು ಸ್ವೀಕರಿಸಿದ್ದಾರೆ ಎಂದು ಫೋನ್ ಆರ್ಡರ್ ಆದೇಶದ ಸ್ಕ್ರೀನ್ಶಾಟ್ ಸಹಿತ ಹಂಚಿಕೊಂಡಿದ್ದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ವೈರಲ್ ಆಗಿದೆ, ಮತ್ತು ಅನೇಕರು ಆತನ ಅದೃಷ್ಟವನ್ನು ನಂಬಲು ಸಿದ್ಧವಿಲ್ಲ. ಒಬ್ಬ ವ್ಯಕ್ತಿ ಆಪಲ್ಗೆ ತಮಾಷೆ ಮಾಡಿ, “ಐಫೋನ್ 13 ಮತ್ತು 14 ಎಷ್ಟು ಹೋಲುತ್ತವೆ ಎಂದರೆ ಫ್ಲಿಪ್ಕಾರ್ಟ್ 14 ಅನ್ನು 13 ಎಂದು ತಪ್ಪಾಗಿ ಭಾವಿಸಿದೆ” ಎಂದು ಬರೆದಿದ್ದಾರೆ. ಇನ್ನು ಕೆಲವರು ಪ್ರಾಮಾಣಿಕತೆ ಮೆರೆದು ಫೋನ್ ಹಿಂತಿರುಗಿಸಬೇಕು ಎಂದಿದ್ದಾರೆ.