ಮಿಲ್ಕ್ ಶೇಕ್ ಎಂದರೆ ಎಲ್ಲರಿಗೂ ಇಷ್ಟ. ತಣ್ಣಗಿನ ಮಿಲ್ಕ್ ಶೇಕ್ ಕುಡಿಯುತ್ತಿದ್ದರೆ ಅದರ ಮಜಾನೇ ಬೇರೆ. ಸುಲಭವಾಗಿ ಮಾಡುವಂತಹ ಒರಿಯೋ ಮಿಲ್ಕ್ ಶೇಕ್ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಒರಿಯೋ ಕುಕ್ಕೀಸ್-4, ತಣ್ಣಗಿನ ಹಾಲು-1 ಕಪ್, ವೆನಿಲ್ಲಾ ಎಸೆನ್ಸ್-1/2 ಟೀ ಸ್ಪೂನ್, ಸಕ್ಕರೆ-1/2 ಟೇಬಲ್ ಸ್ಪೂನ್, ಐಸ್ ಕ್ಯೂಬ್ಸ್-2, ಚಾಕೋಲೇಟ್ ಸಿರಪ್-1 ಟೇಬಲ್ ಸ್ಪೂನ್, ವೆನಿಲ್ಲಾ ಐಸ್ ಕ್ರೀಂ.
ಮಾಡುವ ವಿಧಾನ:
ಒರಿಯೋ ಕುಕ್ಕೀಸ್ ಅನ್ನು ತುಂಡುಗಳನ್ನಾಗಿ ಮಾಡಿ ಮಿಕ್ಸಿ ಜಾರಿಗೆ ಹಾಕಿ ನಂತರ ಅದಕ್ಕೆ ಸಕ್ಕರೆ ವೆನಿಲ್ಲಾ ಎಸೆನ್ಸ್, ಚಾಕೋ ಸಿರಪ್, ಐಸ್ ಕ್ಯೂಬ್, ಹಾಲು ಹಾಕಿ ರುಬ್ಬಿ ಒಂದು ಗ್ಲಾಸ್ ಗೆ ಹಾಕಿ. ಸರ್ವ್ ಮಾಡುವಾಗ ಒರಿಯೋ ಬಿಸ್ಕೆಟ್ ಅನ್ನು ಪುಡಿ ಮಾಡಿ ಅದರ ಮೇಲೆ ಉದುರಿಸಿ.