alex Certify ಒಮ್ಮೆ ಕೊಲ್ಲಾಪುರದ ಮಹಾಲಕ್ಷ್ಮಿ ದರ್ಶನ ಮಾಡಿ ಬನ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮ್ಮೆ ಕೊಲ್ಲಾಪುರದ ಮಹಾಲಕ್ಷ್ಮಿ ದರ್ಶನ ಮಾಡಿ ಬನ್ನಿ

ಮಹಾರಾಷ್ಟ್ರದಲ್ಲಿರುವ ಕೊಲ್ಲಾಪುರದ ಅತಿ ಪ್ರಸಿದ್ಧ ಸ್ಥಳಗಳಲ್ಲಿ ‘ಮಹಾಲಕ್ಷ್ಮಿ’ಅಥವಾ ‘ಅಂಬಾಬಾಯಿ ದೇವಾಲಯ’ವೂ ಒಂದು. ಪುರಾಣೋಕ್ತ 108 ಶಕ್ತಿ ಸ್ಥಳಗಳಲ್ಲಿ ಇದೂ ಒಂದು. ಕ್ರಿ.ಶ. 7 ನೆಯ ಶತಮಾನದಲ್ಲಿ ಚಾಲುಕ್ಯರ ರಾಜ, ‘ಕರ್ಣದೇವ’ನು ಈ ದೇವಾಲಯ ನಿರ್ಮಾಣವನ್ನು ಪ್ರಾರಂಭಿಸಿದನು. ಮುಂದೆ ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ ‘ಶಿಲಾಹಾರ ಯಾದವ ರಾಜರು’ ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದರು.

40 ಕಿಲೋ ತೂಗುವ ಇಲ್ಲಿಯ ಮಹಾಲಕ್ಷ್ಮಿ ಸ್ವಯಂಭೂ ಮೂರ್ತಿಯಾಗಿದ್ದು , ಇದನ್ನು ಯಾವುದೇ ಶಿಲ್ಪ ಕೃತಿಯಂತೆ ಕಟೆಯದೇ ಮೂಲ ರೂಪದಲ್ಲಿಯೇ ಉಳಿಸಿಕೊಳ್ಳಲಾಗಿದೆ.

ಮಹಾವಿಷ್ಣುವೇ ಮಹಾಲಕ್ಷ್ಮಿಯ ರೂಪದಲ್ಲಿ ಇಲ್ಲಿ ನೆಲೆಸಿರುವುದರಿಂದ ಈ ಕ್ಷೇತ್ರವನ್ನು ‘ದಕ್ಷಿಣ ಕಾಶಿ’ಯೆಂದೂ ಕರೆಯುವ ವಾಡಿಕೆಯಿದೆ. ದೇವಿಗೆ ಸಮರ್ಪಣೆ ಮಾಡಲು ‘ಕಮಲ ಪುಷ್ಪ’ಗಳು ಇಲ್ಲಿ ಸಿಗುತ್ತವೆ.

ಬೆಂಗಳೂರಿಂದ ಕೊಲ್ಲಾಪುರಕ್ಕೆ 796 ಕಿಲೋ ಮೀಟರ್ ಇದ್ದು, ಇಲ್ಲಿಗೆ ರೈಲಿನ ವ್ಯವಸ್ಥೆ ಚೆನ್ನಾಗಿದೆ. ಅಲ್ಲಿಂದ ನಾಲ್ಕು ಕಿಲೋ ಮೀಟರ್ ದೂರವಿರುವ ದೇವಸ್ಥಾನಕ್ಕೆ ಹೋಗಲು ಟ್ಯಾಕ್ಸಿ – ಆಟೋಗಳ ವ್ಯವಸ್ಥೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...