alex Certify ಒಮಿಕ್ರಾನ್ ಸಿಂಪ್ಟಮ್ಸ್ ಗುರುತಿಸಲು ತಜ್ಞಪಡೆಯ ಹರಸಾಹಸ….! ಕೋವಿಡ್ ಲಕ್ಷಣಗಳಿದ್ರೂ ಮೈ ಮರೆಯದಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಸಿಂಪ್ಟಮ್ಸ್ ಗುರುತಿಸಲು ತಜ್ಞಪಡೆಯ ಹರಸಾಹಸ….! ಕೋವಿಡ್ ಲಕ್ಷಣಗಳಿದ್ರೂ ಮೈ ಮರೆಯದಿರಿ

ಒಮಿಕ್ರಾನ್, ಈ ಹೊಸ ತಳಿಯ ಬಗ್ಗೆ ಉತ್ತರಗಳಿಗಿಂತ ಪ್ರಶ್ನೆಗಳೆ ಹೆಚ್ಚಿವೆ. ವಿಶ್ವ ಆರೋಗ್ಯ ಸಂಸ್ಥೆಯೆ ಈ ಮ್ಯೂಟೇಟೆಡ್ ಸೋಂಕಿನ ಬಗ್ಗೆ ದಿನಕ್ಕೊಂದು ಗಂಭೀರ ಮಾಹಿತಿ ನೀಡುತ್ತಿದೆ. ಸಧ್ಯಕ್ಕಿರುವ ವೈಜ್ಞಾನಿಕ ಪುರಾವೆ ಪ್ರಕಾರ ಡೆಲ್ಟಾಗಿಂತ ಮೂರು ಪಟ್ಟು ವೇಗವಾಗಿ ಈ ವೈರಸ್ ಹರಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಗಿದ್ರೆ ಈ ಹೊಸ ರೂಪದ ಸೋಂಕಿನ ಗುಣಲಕ್ಷಣಗಳೇನು, ಯಾವ ರೀತಿ ಈ ಸೋಂಕನ್ನು ಗುರುತಿಸಬಹುದು ಎನ್ನುವುದರ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಲೆ ಇದೆ.

ಒಮಿಕ್ರಾನ್ ಸೋಂಕನ್ನು ಮೊದಲು ಗುರುತಿಸಿದ, ಈ ಸೋಂಕಿತರಿಗೆ ಚಿಕಿತ್ಸೆ ನೀಡಿದ ಸೌತ್ ಆಫ್ರಿಕಾದ ವೈದ್ಯೆ ಒಮಿಕ್ರಾನ್ ಲಕ್ಷಣಗಳು ಸೌಮ್ಯವಾಗಿದ್ರು ವಿಭಿನ್ನವಾಗಿವೆ. ಯಾರಿಗು ರುಚಿ ಸಿಗದಿರುವುದು, ವಾಸನೆ ಶಕ್ತಿ ಕುಂದುವುದಿಲ್ಲ. ಆದರೆ ಸುಸ್ತು ಹಾಗೂ ಹೃದಯದ ಬಡಿತ ಹೆಚ್ಚಾಗುತ್ತದೆ ಎಂದಿದ್ದಾರೆ.

ದೇಶವೊಂದರ ಅಧ್ಯಕ್ಷ ಈ ಗಾಯಕಿಯ ಅಪ್ಪಟ ಅಭಿಮಾನಿ…!

ಗಂಟಲು ಕೆರೆತ ಹಾಗೂ ಕಡಿತ, ಉಸಿರಾಟದ ತೊಂದರೆ, ದೇಹ ಬೇನೆ ಮುಂತಾದ ಲಕ್ಷಣಗಳಿದ್ದಲ್ಲಿ ಎಚ್ಚರ ವಹಿಸಿ ಟೆಸ್ಟ್ ಗೆ ಒಳಗಾಗವುದು ಸೂಕ್ತ ಎಂದು ತಜ್ಞರು ಎಚ್ಚರಿಸಿದ್ದಾರೆ. ಒಮಿಕ್ರಾನ್ ಗುಣಲಕ್ಷಣಗಳು ತೀರಾ ಸೌಮ್ಯವಾಗಿದ್ದರು, ಸೋಂಕಿತರನ್ನ ದುರ್ಬಲಗೊಳಿಸಲು ಶಕ್ತವಾಗಿದೆ ಎಂಬುದು ವಿಶ್ವದ ಹಲವು ತಜ್ಞರ ಅಭಿಪ್ರಾಯ. ಹೊಸ ವೇರಿಯಂಟ್ ನ ಬಗ್ಗೆ ತಿಳಿಯುವುದು ಸಾಕಷ್ಟಿದೆ. ಕೊರೋನಾದ ಸಾಮಾನ್ಯ ಲಕ್ಷಣಗಳಾದ ನೆಗಡಿ, ಕೆಮ್ಮು, ಚಳಿಜ್ವರ, ಗಂಟಲು ಕೆರೆತ, ದೇಹಬಾದೆ ಕಂಡುಬಂದರೆ ನಿರ್ಲಕ್ಷಿಸದೆ ಖಂಡಿತ ಪರೀಕ್ಷೆಗೆ ಒಳಗಾಗಬೇಕು, ಎಂದು ಅಮೆರಿಕಾದ ವೆಕ್ಸ್ನರ್ ಮೆಡಿಕಲ್ ಸೆಂಟರ್ ನ ವೈದ್ಯ ಡಾ. ಮಹ್ದೀ ಸೊಭಾನಿ, ಮನವಿ ಮಾಡಿದ್ದಾರೆ.

ಡಬಲ್ ಡೋಸ್ ವ್ಯಾಕ್ಸಿನ್ ಅಲ್ಲ ಬೂಸ್ಟರ್ ಡೋಸ್ ಪಡೆದವ್ರಲ್ಲು ಒಮಿಕ್ರಾನ್ ಪತ್ತೆಯಾಗಿದೆ. ಈ ವೈರಸ್ ಬಗ್ಗೆ ನಮ್ಮ ಬಳಿ ಪೂರ್ತಿ ಮಾಹಿತಿ ಇಲ್ಲ, ಇರುವ ಸಣ್ಣ ಡೇಟಾದ ಆಧಾರದ ಮೇಲೆ ಯಾವುದೇ ಕ್ಲಿನಿಕಲ್ ನಿರ್ಧಾರ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಈ ಮೊದಲು ಪಾಲಿಸುತ್ತಿದ್ದ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಿ ಎಂದು ತಜ್ಞರು ಎಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...