ಬೆಂಗಳೂರು : ರಾಜ್ಯ ಸೇರಿದಂತೆ ದೇಶದಲ್ಲಿ ಆತಂಕಕ್ಕೆ ಕಾರಣವಾಗಿರುವ ಓಮಿಕ್ರಾನ್ ನ ಮೊದಲೆರಡು ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದ್ದವು. ನಗರದಲ್ಲಿನ 46 ವರ್ಷದ ವೈದ್ಯರೊಬ್ಬರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿತ್ತು. ಹೀಗಾಗಿ ಅವರ ಸಂಪರ್ಕದಲ್ಲಿದ್ದವರನ್ನು ಟೆಸ್ಟಿಂಗ್ ಗೆ ಒಳಪಡಿಸಲಾಗಿತ್ತು. ಆದರೆ, ಅವರ ಸಂಪರ್ಕದಲ್ಲಿದ್ದವರಲ್ಲಿ ಹೊಸ ರೂಪಾಂತರಿ ಪತ್ತೆಯಾಗದಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಅವರ ಸಂಪರ್ಕದಲ್ಲಿದ್ದ ಐವರ ಮಾದರಿಗಳ ಪ್ರಾಥಮಿಕ ವರದಿ ಬಂದಿದ್ದು, ಅದು ನೆಗೆಟಿವ್ ಆಗಿದೆ. ಹೀಗಾಗಿ ಬಿಬಿಎಂಪಿಗೆ ತಲೆಯ ಭಾರ ಇಳಿದಂತಾಗಿದೆ. ವೈದ್ಯರಲ್ಲಿ ಓಮಿಕ್ರಾನ್ ಕಾಣಿಸಿಕೊಳ್ಳುತ್ತಿದ್ದಂತೆ, ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಹೀಗಾಗಿ ಅವರ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸದ್ಯ ಅವರೆಲ್ಲರ ಜಿನೋಮ್ ಸಿಕ್ವೆನ್ಸಿಂಗ್ ವರದಿ ಬಂದಿದ್ದು, ಓಮಿಕ್ರಾನ್ ನೆಗೆಟಿವ್ ಬಂದಿದೆ.
ಅಲ್ಲಾದ್ದೀನ್ ಮ್ಯಾಜಿಕ್ ಕಾರ್ಪೆಟ್ ಅನ್ನು ಮರುಸೃಷ್ಟಿಸಿದ ಯೂಟ್ಯೂಬರ್: ವಿಡಿಯೋ ವೈರಲ್
ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಅಯುಕ್ತ ಗೌರವ್ ಗುಪ್ತಾ, ಓಮಿಕ್ರಾನ್ ಕಾಣಿಸಿಕೊಡಿಂದ್ದ ವೈದ್ಯರ ಸಂಪರ್ಕಕ್ಕೆ ಬಂದಿದ್ದ ಐವರ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸಿಂಗ್ ಗೆ ರವಾನಿಸಲಾಗಿತ್ತು. ಸದ್ಯ ವರದಿ ಬಂದಿದ್ದು, ಓಮಿಕ್ರಾನ್ ನೆಗೆಟಿವ್ ಬಂದಿದೆಯಾದರೂ ಡೆಲ್ಟಾ ರೂಪಾಂತರ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ. ಡಿ. 1 ರಂದು ಜೀನೋಮ್ ಅನುಕ್ರಮಕ್ಕಾಗಿ ರವಾನಿಸಲಾಗಿತ್ತು. ಸದ್ಯ ವರದಿ ಬಂದಿದೆ. ಆದರೆ, ಅಧಿಕೃತ ಘೋಷಣೆಯೊಂದೆ ಬಾಕಿ ಇದೆ ಎನ್ನಲಾಗಿದೆ.