ಚಳಿಗಾಲದಲ್ಲಿ ತ್ವಚೆ ಒಣಗುವುದು ಸಾಮಾನ್ಯ ಸಮಸ್ಯೆ. ಇದನ್ನು ಪರಿಹರಿಸಲು ಹೀಗೆ ಮಾಡಬಹುದು. ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ವಿಪರೀತ ತುರಿಕೆ ಹಾಗೂ ಕಡಿತ ಸಾಮಾನ್ಯವಾಗಿ ಕಂಡು ಬರುತ್ತದೆ. ಇದನ್ನು ದೂರ ಮಾಡಲು ಲೋಳೆಸರವನ್ನು ಬಳಸಿ. ಅಲೋವೆರಾದ ಸಿಪ್ಪೆ ಹಾಗೂ ಮುಳ್ಳನ್ನು ಪ್ರತ್ಯೇಕಿಸಿ. ತುರಿಕೆ ಇರುವ ಅಥವಾ ಒಣ ಚರ್ಮಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ.
ಟೊಮೆಟೊ ಪೇಸ್ಟ್ ಗೆ ರೋಸ್ ವಾಟರ್ ಬೆರೆಸಿ ಕೈ ಕಾಲು ಕುತ್ತಿಗೆಗೆ ಹಚ್ಚಿ. ಇದರಿಂದ ತ್ವಚೆ ಒಡೆಯುವುದಿಲ್ಲ. ಒಣತ್ವಚೆ ಇರುವಲ್ಲಿಗೆ ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದಲೂ ಪರಿಹಾರ ಕಂಡುಕೊಳ್ಳಬಹುದು.
ಜೇನುತುಪ್ಪಕ್ಕೆ ಗುಲಾಬಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿದರೂ ತ್ವಚೆ ಒಣಗುವುದಿಲ್ಲ. ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖವೂ ಹೊಳೆಯುತ್ತದೆ. ಒಣ ತ್ವಚೆ ಸಮಸ್ಯೆಯೂ ದೂರವಾಗುತ್ತದೆ.