ಬೇಸಿಗೆ ಅಂದ ಮೇಲೆ ಹಾಲು ಒಡೆಯುವುದು ಸಾಮಾನ್ಯ. ಹೀಗೆ ಒಡೆದ ಹಾಲಿನಿಂದ ಮಾಡಬಹುದಾದ ಸಿಹಿ ತಿನಿಸೊಂದರ ರೆಸಿಪಿ ಇಲ್ಲಿದೆ. ಕಡಿಮೆ ಪದಾರ್ಥಗಳಲ್ಲಿ ಕೇವಲ 15 ನಿಮಿಷದಲ್ಲಿ ತಯಾರಿಸಬಹುದಾದ ಅವಲಕ್ಕಿ ಸಿಹಿ ಇದು.
ಒಡೆದ ಹಾಲಿಗೆ ಅರ್ಧ ಹೋಳು ನಿಂಬೆ ಹಣ್ಣು ಹಿಂಡಿ ಮತ್ತಷ್ಟು ಕುದಿಸಿ ಕೆಳಗಿಳಿಸಿ. ಇದನ್ನ ಶೋಧಿಸಿ ಹೊಡೆದ ಹಾಲಿನ ಭಾಗವನ್ನು ಪ್ರತ್ಯೇಕಿಸಿ.
ಎರಡು ಹಿಡಿ ಅವಲಕ್ಕಿಯನ್ನು ನೆನಸಿ. ಅರ್ಧ ಲೀಟರ್ ಒಡೆದ ಹಾಲಿಗೆ ಎರಡು ಹಿಡಿ ಅವಲಕ್ಕಿ ಸಾಕು.
ಒಂದು ಕಪ್ ಬೆಲ್ಲ ಹಾಗೂ 4-5 ಕುಟ್ಟಿ ಪುಡಿ ಮಾಡಿದ ಏಲಕ್ಕಿ.
ಒಲೆಯ ಮೇಲೆ ಬೆಲ್ಲ ಇಟ್ಟು ಕರಗಿಸಿ ನಂತರ ಅವಲಕ್ಕಿ, ಪ್ರತ್ಯೇಕಿಸಿದ ಒಡೆದ ಹಾಲಿನ ಅಂಶ, ಏಲಕ್ಕಿ ಪುಡಿ ಇಷ್ಟನ್ನೂ ಮಂದ ಉರಿಯಲ್ಲಿ ಹಾಕಿ ಕೂಡಿಸ್ತಾ ಇದ್ದು ಒಂದು ಹದಕ್ಕೆ ಬಂದ ನಂತರ ಕೆಳಗಿಳಿಸಿ ಸವಿಯಬಹುದು. ಇನ್ನೂ ಹೆಚ್ಚಿನ ರುಚಿ ಬೇಕು ಅಂದ್ರೆ ಕಾಯಿತುರಿಯನ್ನೂ ಹಾಕಬಹುದು.