ಟಿಕ್‌ಟಾಕ್, ರೀಲ್ಸ್, ಮೋಜ್ ಸೇರಿ ಹಲವು ಆ್ಯಪ್‌ಗಳು, ಜಾಲತಾಣಗಳು ಸಾಮಾನ್ಯ ಜನರನ್ನು ಸಹ ಸೆಲೆಬ್ರಿಟಿಗಳನ್ನಾಗಿ ಮಾಡಿದೆ. ಹೀಗೆ ಆ್ಯಪ್‌ಗಳನ್ನು ಬಳಸಿ ಫೇಮಸ್ ಆದವರು ಚುನಾವಣೆಗಳಲ್ಲಿ ಸ್ಪರ್ಧಿಸಲು ಪಕ್ಷಗಳಿಂದ ಟಿಕೆಟ್ ಪಡೆಯುತ್ತಿದ್ದಾರೆ. ಬಹುತೇಕ ಯುವಕರು ಇಂತಹ ವೇದಿಕೆಗಳನ್ನು ಬಳಸಿಕೊಂಡು ಹಣವನ್ನೂ ಗಳಿಸುತ್ತಿದ್ದಾರೆ. ಆದರೆ, ಅಮೆರಿಕದಲ್ಲಿ ಕೇವಲ ಒಂಬತ್ತು ವರ್ಷದ ಬಾಲಕಿಯು ಟಿಕ್‌ಟಾಕ್‌ನಲ್ಲಿ ಸ್ಟಾರ್ ಆಗಿದ್ದು, ಸುಮಾರು ಆರು ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾಳೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ.
ಕೊಲೊರಾಡೋ ನಿವಾಸಿಯಾದ ಕೈಯಾ ಅರಾಗನ್ ಎಂಬ ಬಾಲಕಿಯು ವಸ್ತ್ರವಿನ್ಯಾಸ ಮಾಡುತ್ತಾಳೆ. ಆಧುನಿಕ ಫ್ಯಾಷನ್‌ಗೆ ತಕ್ಕಂತೆ ಬಟ್ಟೆಗಳನ್ನು ಹೊಲಿಯುತ್ತಾಳೆ. ಹೀಗೆ ವಸ್ತ್ರವಿನ್ಯಾಸ, ಬಟ್ಟೆ ಹೊಲಿಯುವ ವೀಡಿಯೊಗಳನ್ನು ಮಾಡುವುದರಿಂದ ಲಕ್ಷಾಂತರ ಜನ ಈಕೆಯ ಫಾಲೋವರ್ಸ್‌ಗಳಾಗಿದ್ದಾರೆ. ವೃತ್ತಿಪರ ಫ್ಯಾಷನ್ ಡಿಸೈನರ್‌ಗಳು ಸಹ ಬಾಲಕಿಯ ಕೌಶಲವನ್ನು ಮೆಚ್ಚಿದ್ದಾರೆ.
ಅಷ್ಟೇ ಅಲ್ಲ, ಕೇವಲ ಒಂಬತ್ತು ವರ್ಷದ ಕೈಯಾ ಈಗ ಫ್ಯಾಷನ್ ಡಿಸೈನ್ ಕಂಪನಿಯೊಂದರ ಒಡೆತನ ಹೊಂದಿದ್ದಾಳೆ ಎಂದರೆ ನಂಬಬೇಕು. ನಾಲ್ಕು ವರ್ಷದವಳಿದ್ದಾಗಲೇ ಕೈಯಾಗೆ ಬಟ್ಟೆ ಹೊಲಿಯುವ, ಫ್ಯಾಷನ್ ಡಿಸೈನಿಂಗ್ ಮಾಡುವುದರಲ್ಲಿ ಆಸಕ್ತಿ ಇದ್ದ ಕಾರಣ ಆಕೆಯ ತಾಯಿಯು ಬಟ್ಟೆ ಹೊಲಿಯುವ ಮಷೀನ್ ಕೊಡಿಸಿದ್ದಾರೆ. ಇದೇ ಆಸಕ್ತಿಯಿಂದ ಈಗ ಕೈಯಾ ಸ್ಟಾರ್ ಆಗಿದ್ದಾಳೆ.
SHOCKING NEWS: ನಿಷೇಧಕ್ಕೊಳಗಾದರೂ ಹೊಸ ಅವತಾರದಲ್ಲಿ ಕಾರ್ಯ ಚಟುವಟಿಕೆ ಮುಂದುವರೆಸಿದ ಚೀನಾ ಆಪ್‍ಗಳು..!
ಈಕೆಯ ವಿಶಿಷ್ಟ ಕೌಶಲವುಳ್ಳ ವೀಡಿಯೊಗಳನ್ನು ಕೈಯಾ ತಾಯಿ ಟೋನಿ ಅವರು ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಟಿಕ್‌ಟಾಕ್‌ನಲ್ಲಿ ‘ಮಿಡಲ್ ಮಾಮ್’ ಎಂಬ ಹೆಸರಿನ ಖಾತೆಗೆ 5.8 ಲಕ್ಷ ಫಾಲೋವರ್‌ಗಳಿದ್ದರೆ, 2.26 ಕೋಟಿ ಜನ ಲೈಕ್ ಮಾಡಿದ್ದಾರೆ. ಹಾಗಾಗಿ ಕೈಯಾ ಕೇವಲ ಒಂಬತ್ತು ವರ್ಷಕ್ಕೆ ಸೆಲೆಬ್ರಿಟಿ ಆಗಿದ್ದಾಳೆ.