alex Certify ಒಂದೇ ಹಗ್ಗದಲ್ಲಿ ನೇತಾಡುತ್ತಿತ್ತು ಮೂವರು ಸಹೋದರಿಯರ ಶವ, ನಿಗೂಢವಾಗಿದೆ ಸಾವಿನ ಕಾರಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಹಗ್ಗದಲ್ಲಿ ನೇತಾಡುತ್ತಿತ್ತು ಮೂವರು ಸಹೋದರಿಯರ ಶವ, ನಿಗೂಢವಾಗಿದೆ ಸಾವಿನ ಕಾರಣ…!

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಮೂವರು ಸಹೋದರಿಯರು ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

23 ವರ್ಷದ ಸೋನು, 21 ವರ್ಷದ ಸಾವಿತ್ರಿ ಹಾಗೂ 19 ವರ್ಷದ ಲಲಿತಾ ಮೃತಪಟ್ಟ ಯುವತಿಯರು. ಇವರಲ್ಲಿ ಇಬ್ಬರು ಕಾಲೇಜಿನಲ್ಲಿ ಓದ್ತಾ ಇದ್ರು. ಒಬ್ಬಳಿಗೆ ಇತ್ತೀಚೆಗಷ್ಟೆ ಮದುವೆಯಾಗಿತ್ತು. ಕೋಟಾಘಾಟ್‌ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದು ಆತ್ಮಹತ್ಯೆ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಆದ್ರೆ ಸ್ಥಳದಲ್ಲಿ ಸುಸೈಡ್‌ ನೋಟ್‌ ಪತ್ತೆಯಾಗಿಲ್ಲ. ಮೂವರು ಸಹೋದರಿಯರು ಸಾವಿನ ನಿರ್ಧಾರಕ್ಕೆ ಬಂದಿದ್ದೇಕೆ ಎಂಬ ಬಗ್ಗೆ ಸಹ ಪೊಲೀಸರು ತನಿಖೆ ಮಾಡ್ತಿದ್ದಾರೆ. ಕೌಟುಂಬಿಕ ಕಲಹ ಕಾರಣವಿರಬಹುದು ಅಂತಾ ಹೇಳಲಾಗ್ತಿದೆ. ಮೃತರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಉಸಿರುಗಟ್ಟಿಸುವಿಕೆಯಿಂದ ಸಾವು ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...