ಒಂದೇ ಸಂಖ್ಯೆಯ ಮತವನ್ನು ಪಡೆದಿದ್ದಕ್ಕೆ ಟಾಸ್ ಮೂಲಕ ಅಭ್ಯರ್ಥಿ ಆಯ್ಕೆ..! 09-05-2022 7:56AM IST / No Comments / Posted In: Latest News, Live News, International ಚುನಾವಣೆಗಳಲ್ಲಿ ಕೆಲವು ಅಭ್ಯರ್ಥಿಗಳು ಭರ್ಜರಿ ಅಂತರದಿಂದ ಜಯಭೇರಿ ಬಾರಿಸಿದ್ರೆ, ಇನ್ನೂ ಕೆಲವರು ಕೇವಲ ಒಂದು ಮತಗಳಿಂದ ಗೆದ್ದಿರುವ ಉದಾಹರಣೆಗಳಿವೆ. ಆದರೆ, ಇಬ್ಬರು ಅಭ್ಯರ್ಥಿಗಳು ಒಂದೇ ಸಂಖ್ಯೆಯ ಮತಗಳನ್ನು ಪಡೆದಾಗ ಏನಾಗುತ್ತದೆ ಎಂಬುದು ಇಲ್ಲೊಂದೆಡೆ ವಿಲಕ್ಷಣ ಘಟನೆ ನಡೆದಿದೆ. ಯುಕೆಯಲ್ಲಿ, ಸ್ಥಳೀಯ ಚುನಾವಣಾ ಫಲಿತಾಂಶವು ಒಂದು ಕೌಂಟಿಯಲ್ಲಿ ಟೈನಲ್ಲಿ ಕೊನೆಗೊಂಡಿದೆ. ಹೀಗಾಗಿ ನಾಣ್ಯವನ್ನು ಟಾಸ್ ಮಾಡುವ ಮುಖಾಂತರ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಾಯಿತು. ಸೌತ್ ವೇಲ್ಸ್‌ನ ಮೊನ್‌ಮೌತ್‌ಶೈರ್ ಕೌಂಟಿ ಕೌನ್ಸಿಲ್ ಈ ಘಟನೆಗೆ ಸಾಕ್ಷಿಯಾಗಿದೆ. ಅಂತಿಮ ಎಣಿಕೆಯ ನಂತರ ಇಬ್ಬರು ಅಭ್ಯರ್ಥಿಗಳು ಸಮಾನ ಸಂಖ್ಯೆಯ ಮತಗಳನ್ನು ಪಡೆದ ಕಾರಣ, ನಾಣ್ಯವನ್ನು ಟಾಸ್ ಮಾಡಲಾಯಿತು. ಇದನ್ನಾಧರಿಸಿ ವಿಜೇತರನ್ನು ನಿರ್ಧರಿಸಲಾಯಿತು. ಮಾನ್‌ಮೌತ್‌ಶೈರ್ ಕೌಂಟಿ ಕೌನ್ಸಿಲ್‌ನಲ್ಲಿ ಲೇಬರ್‌ನ ಬ್ರಯೋನಿ ನಿಕೋಲ್ಸನ್ ಕನ್ಸರ್ವೇಟಿವ್‌ನ ಟೊಮೊಸ್ ಡೇವಿಸ್ ವಿರುದ್ಧ ಸ್ಪರ್ಧಿಸಿದ್ದರು. ಇಬ್ಬರೂ ಅಭ್ಯರ್ಥಿಗಳು ತಲಾ 679 ಮತಗಳನ್ನು ಪಡೆದಿದ್ದಾರೆ. ನಾಣ್ಯವನ್ನು ಟಾಸ್ ಮಾಡುವ ಮುಖಾಂತರ ಟೊಮೊಸ್ ಡೇವಿಸ್ ಕೌನ್ಸಿಲ್ಗೆ ಆಯ್ಕೆಯಾಗಿದ್ದಾರೆ. ಟಾಸ್‌ನೊಂದಿಗೆ ವಿಜೇತರನ್ನು ಘೋಷಿಸಿದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗಿದೆ. Final Monmouthshire ward of the day separated by a coin toss! Just when you thought it couldn't get any more tense#SouthWalesvote2022 pic.twitter.com/Ut6jONqUR3 — Dan Barnes (@cobaines) May 6, 2022