alex Certify ಒಂದೇ ವರ್ಷದಲ್ಲಿ ಐದನೇ ಬಾರಿ ಭದ್ರಾ ಜಲಾಶಯದಿಂದ ನದಿಗೆ ನೀರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ವರ್ಷದಲ್ಲಿ ಐದನೇ ಬಾರಿ ಭದ್ರಾ ಜಲಾಶಯದಿಂದ ನದಿಗೆ ನೀರು…!

ರಾಜ್ಯದಲ್ಲಿ ಈ ಬಾರಿ ಮಳೆ ಬಿಡುವು ನೀಡದಂತೆ ಸತತವಾಗಿ ಸುರಿಯುತ್ತಿದೆ. ಇದರ ಪರಿಣಾಮ ಹಳ್ಳಕೊಳ್ಳಗಳು, ಕೆರೆ ನದಿಗಳು ತುಂಬಿ ಹರಿಯುತ್ತಿದ್ದು ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಮತ್ತೊಂದು ಮಹತ್ವದ ಸಂಗತಿ ಎಂದರೆ ಭದ್ರಾ ಜಲಾಶಯದ ಆರು ದಶಕಗಳ ಇತಿಹಾಸದಲ್ಲಿ ಮುಂಗಾರು ಆರಂಭವಾದ ಬಳಿಕ ಅತಿ ಕಡಿಮೆ ಅವಧಿಯಲ್ಲಿ ಜಲಾಶಯ ಭರ್ತಿಯಾಗಿದೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಈಗಲೂ ಸಹ ಮಳೆ ಮುಂದುವರೆದಿದ್ದು, ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಹೀಗಾಗಿ ಕ್ರಸ್ಟ್ ಗೇಟ್ ಗಳನ್ನು ತೆಗೆದು ನದಿಗೆ ನೀರು ಬಿಡಲಾಗುತ್ತಿದ್ದು, ಇದೇ ವರ್ಷದಲ್ಲಿ ಐದನೇ ಬಾರಿ ನದಿಗೆ ನೀರು ಬಿಟ್ಟಂತಾಗಿದೆ. 94 ದಿನಗಳ ಅವಧಿಯಲ್ಲಿ ಭದ್ರಾ ಜಲಾಶಯದಿಂದ ಒಟ್ಟು 91 ಟಿಎಂಸಿ ನೀರನ್ನು ನದಿಗೆ ಹರಿಸಲಾಗಿದೆ.

ಜುಲೈ 14ರಂದು ಮೊದಲ ಬಾರಿಗೆ ನದಿಗೆ ನೀರು ಹರಿಸಲಾಗಿದ್ದರೆ, ಜುಲೈ 26ರಂದು ಎರಡನೇ ಬಾರಿಗೆ, ಜುಲೈ 31ರಂದು ಮೂರನೇ ಬಾರಿ, ಆಗಸ್ಟ್ 24ರಂದು ನಾಲ್ಕನೇ ಬಾರಿ ಹಾಗೂ ಅಕ್ಟೋಬರ್ 13ರಂದು ಐದನೇ ಬಾರಿಗೆ ಕ್ರಸ್ಟ್ ಗೇಟ್ ತೆಗೆದು ನದಿಗೆ ಹೆಚ್ಚುವರಿ ನೀರನ್ನು ಹರಿಸಲಾಗಿದೆ. ಈಗಲೂ ಸಹ ಜಲಾಶಯದ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...