
ಯುಕೆಯ ಹರ್ಟ್‌ಫೋರ್ಡ್‌ಶೈರ್ ಮೂಲದ ಡಗ್ಲಾಸ್ ಸ್ಮಿತ್ ಎಂಬುವವರು ಈ ಸಾಧನೆ ಮಾಡಿದವರು. ಒಂದೇ ಕಾಂಡದಿಂದ ಅತಿ ಹೆಚ್ಚು ಟೊಮೆಟೊ ಬೆಳೆಯುವ ಮೂಲಕ ತನ್ನದೇ ಆದ ದಾಖಲೆಯನ್ನು ಮುರಿದಿದ್ದಾರೆ.
ಸೆಪ್ಟೆಂಬರ್ 2021 ರಲ್ಲಿ, ಅವರ ಟೊಮೆಟೊ ಸಸ್ಯಗಳನ್ನು ಕೊಯ್ಲು ಮಾಡುವಾಗ, ಡೌಗ್ಲಾಸ್ 1,269 ಟೊಮೆಟೊಗಳಿರುವುದನ್ನು ಪತ್ತೆ ಮಾಡಿದ್ದಾರೆ. ನಂತರ ಅವರು ವಿಶ್ವ ದಾಖಲೆಗೆ ಅರ್ಜಿ ಸಲ್ಲಿಸಿದ್ದರು. ಈ ಟೊಮೆಟೊಗಳನ್ನು ಡಗ್ಲಾಸ್ ಹಿಂಭಾಗದ ತೋಟದಲ್ಲಿ ಬೆಳೆಸಿದ್ದರು.
ಈ ಮೊದಲು ಅವರು 839 ಟೊಮೆಟೊಗಳನ್ನು ಬೆಳೆದಿದ್ದರು. ಇದೀಗ 1,269 ಟೊಮೆಟೊಗಳನ್ನು ಬೆಳೆಸುವುದರ ಮೂಲಕ ತಮ್ಮದೇ ಆದ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಡೌಗ್ಲಾಸ್ ತನ್ನ ಟೊಮೆಟೊ ಕೃಷಿ ವಿಧಾನಗಳಿಗಾಗಿ ವಿಶ್ಲೇಷಣಾತ್ಮಕ ವಿಧಾನವನ್ನು ತೆಗೆದುಕೊಂಡಿದ್ದಾರೆ. ಅವರು ವಿವಿಧ ವೈಜ್ಞಾನಿಕ ಪತ್ರಿಕೆಗಳನ್ನು ಅಧ್ಯಯನ ಮಾಡಿದ್ದರು ಮತ್ತು ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಮಣ್ಣಿನ ಮಾದರಿಗಳನ್ನು ಸಹ ತೆಗೆದುಕೊಂಡಿದ್ದಾರೆ.