alex Certify ಒಂದು ಲೋಟ ಜ್ಯೂಸ್‌ ನಲ್ಲಿದೆ ನಿಮ್ಮ ‘ಆರೋಗ್ಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಲೋಟ ಜ್ಯೂಸ್‌ ನಲ್ಲಿದೆ ನಿಮ್ಮ ‘ಆರೋಗ್ಯ’

ಕುಂಬಳಕಾಯಿಯನ್ನು ಬಹಳಷ್ಟು ಮಂದಿ ಇಷ್ಟಪಡುವುದಿಲ್ಲ. ಆದರೆ ಇದರಲ್ಲಿರೋ ಆರೋಗ್ಯಕಾರಿ ಅಂಶಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಕುಂಬಳಕಾಯಿ ದೇಹದ ಅನೇಕ ರೋಗಗಳ ವಿರುದ್ಧ ಹೋರಾಡಬಲ್ಲ ಪೋಷಕಾಂಶಗಳನ್ನು ಹೊಂದಿದೆ.

ಜೀವಸತ್ವಗಳು, ಫೈಬರ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳು ಕುಂಬಳಕಾಯಿಯಲ್ಲಿವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಾಲೋಚಿತ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಕುಂಬಳಕಾಯಿಯ ಜ್ಯೂಸ್‌ ಸೇವನೆ ಮಾಡುವುದರಿಂಡ ಡಬಲ್‌ ಲಾಭವಿದೆ. ದೇಹದ ತೂಕ ವೇಗವಾಗಿ ಕಡಿಮೆಯಾಗುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರ ಉಳಿಯುತ್ತವೆ. ಅನೇಕರು ಕುಂಬಳಕಾಯಿಯನ್ನು ಹಲ್ವಾ ಮತ್ತು ಸೂಪ್ ರೂಪದಲ್ಲಿ ಸೇವಿಸಲು ಇಷ್ಟಪಡುತ್ತಾರೆ. ಆದರೆ ಇದನ್ನು ಹೆಚ್ಚು ಹುರಿಯುವುದರಿಂದ ಅದರ ಪೋಷಕಾಂಶಗಳು ನಾಶವಾಗುತ್ತವೆ. ಅದಕ್ಕಾಗಿಯೇ ಕುಂಬಳಕಾಯಿಯ ಜ್ಯೂಸ್‌ ಕುಡಿಯುವಂತೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.

ಕುಂಬಳಕಾಯಿ ಜ್ಯೂಸ್‌ನ ಪ್ರಯೋಜನಗಳು

ಚಳಿಗಾಲದಲ್ಲಿ ನಾವು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸುತ್ತೇವೆ. ಪ್ರತಿದಿನ ಒಂದು ಕಪ್ ಕುಂಬಳಕಾಯಿ ಜ್ಯೂಸ್‌ ಕುಡಿದರೆ ಅಜೀರ್ಣದ ತೊಂದರೆ ಇರುವುದಿಲ್ಲ. ಏಕೆಂದರೆ ನಾರಿನಂಶವು ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ. ಇದು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಅಜೀರ್ಣದ ಸಮಸ್ಯೆ ಇರುವವರಲ್ಲಿ ಸ್ಥೂಲಕಾಯತೆ ಕಂಡುಬರುತ್ತದೆ. ಆರೋಗ್ಯಕರ ಆಹಾರವನ್ನು ಸೇವಿಸದೇ ಇರುವವರಿಗೂ ಬೊಜ್ಜಿನ ತೊಂದರೆ ಸಾಮಾನ್ಯ.

ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಎ, ಇ, ಸಿ ಫೈಬರ್ ಮತ್ತು ಆಂಟಿ-ಒಕ್ಸಿಡೆಂಟ್‌ಗಳ ಗುಣಲಕ್ಷಣಗಳು ಕುಂಬಳಕಾಯಿ ಜ್ಯೂಸ್‌ನಲ್ಲಿವೆ. ಇದು ದೇಹದ ತೂಕವನ್ನು ನಿಯಂತ್ರಿಸುತ್ತದೆ. ಕುಂಬಳಕಾಯಿ ಜ್ಯೂಸ್‌ನಲ್ಲಿರುವ ವಿಟಮಿನ್ ಎ, ಇ ಮತ್ತು ಎಂಟಿಒಕ್ಸಿಡೆಂಟ್‌ಗಳು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕುಂಬಳಕಾಯಿ ರಸವು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಅಷ್ಟೇ ಅಲ್ಲ ಈ ಜ್ಯೂಸ್‌ ದೇಹದಲ್ಲಿ ಇರುವ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಪರಿಣಾಮವನ್ನು ತೋರಿಸುತ್ತದೆ. ಇದು ದೇಹದ ಊತವನ್ನು ಕಡಿಮೆ ಮಾಡುತ್ತದೆ. ಸರ್ವ ರೋಗಗಳಿಗೂ ಮದ್ದಾಗಿರುವ ಕುಂಬಳಕಾಯಿ ರಸವನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...