alex Certify ಒಂದು ಬಿಟ್ ಕಾಯಿನ್ ದರ 51 ಲಕ್ಷ ರೂಪಾಯಿ; 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಮಿಸ್ಸಿಂಗ್; ದಾಖಲೆ ಬಹಿರಂಗಪಡಿಸಿದ ಸುರ್ಜೇವಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಬಿಟ್ ಕಾಯಿನ್ ದರ 51 ಲಕ್ಷ ರೂಪಾಯಿ; 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಮಿಸ್ಸಿಂಗ್; ದಾಖಲೆ ಬಹಿರಂಗಪಡಿಸಿದ ಸುರ್ಜೇವಾಲ

ನವದೆಹಲಿ: ಕರ್ನಾಟಕದ ಬಿಟ್ ಕಾಯಿನ್ ಕೇಸ್ ಸ್ವಾತಂತ್ರ್ಯಾ ನಂತರದ ಅತಿದೊಡ್ದ ಹಗರಣವಾಗಿದೆ. ಇದರಲ್ಲಿ ಬಿಜೆಪಿ ಹೀರೋ ಮತ್ತು ವಿಲನ್ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲಾ, ಒಂದು ಬಿಟ್ ಕಾಯಿನ್ ದರ 51 ಲಕ್ಷ ರೂಪಾಯಿ ಇದೆ. ರಾಜ್ಯ ಬಿಜೆಪಿ ಸರ್ಕಾರ ಸಾಕ್ಷಿಗಳನ್ನೇ ಮುಚ್ಚಿ ಹಾಕಲು ಮುಂದಾಗಿದೆ. ಶ್ರೀಕಿ ಬಳಿ ರಿಕವರಿ ಮಾಡಲಾಗಿದ್ದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಮಿಸ್ ಆಗಿದೆ ಎಂದು ಆರೋಪಿಸಿದರು.

ಡಿಸೆಂಬರ್ 1, 2020 ಮತ್ತು 14 ಏಪ್ರಿಲ್ ನಲ್ಲಿ ಬಿಟ್ ಕಾಯಿನ್ ವರ್ಗಾವಣೆಯಾಗಿದೆ. 5,240 ಕೋಟಿ ರೂಪಾಯಿ ವರ್ಗಾವಣೆಯಾಗಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು ಎಂದು ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ.

ಬಿಟ್ ಕಾಯಿನ್ ಹಗರಣ ಅಂತರಾಷ್ಟ್ರೀಯ ಕೇಸ್ ಆಗಿದ್ದು, 12-15 ದೇಶಗಳಿಗೆ ಸಂಬಂಧಿಸಿದ ಪ್ರಕರಣವನ್ನು ತನಿಖೆ ನಡೆಸದೇ ಮುಚ್ಚಿ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಇಷ್ಟು ದೊಡ್ಡ ಹಗರಣವನ್ನು ಇಡಿ ಅಥವಾ ಐಟಿಗೆ ವರ್ಗಾವಣೆ ಮಾಡದೇ ಸಾಕ್ಷಿಗಳನ್ನೇ ನಾಶ ಪಡಿಸುವ ಯತ್ನ ನಡೆಸಲಾಗುತ್ತಿದೆ. ಬಿಟ್ ಕಾಯಿನ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದರೆ ಏನರ್ಥ? ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಮೋದಿ ಹಾಗೂ ಜೆ.ಪಿ.ನಡ್ಡಾ ಉತ್ತರಿಸಬೇಕು ಎಂದು ಆಗ್ರಹಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...