alex Certify ಒಂದು ತಿಂಗಳು ನಿಯಮಿತವಾಗಿ ಸೇವಿಸಿ 100 ಗ್ರಾಂ ಹುರಿದ ಕಡಲೆ; ನಿಮ್ಮ ದೇಹಕ್ಕೆ ಸಿಗಲಿದೆ ಅದ್ಭುತ ಪ್ರಯೋಜನ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ತಿಂಗಳು ನಿಯಮಿತವಾಗಿ ಸೇವಿಸಿ 100 ಗ್ರಾಂ ಹುರಿದ ಕಡಲೆ; ನಿಮ್ಮ ದೇಹಕ್ಕೆ ಸಿಗಲಿದೆ ಅದ್ಭುತ ಪ್ರಯೋಜನ !

ಕೆಲವರಿಗೆ ಹುರಿದ ಕಡಲೆ ಕಾಳುಗಳು ಫೇವರಿಟ್‌. ಫ್ರೀಯಾಗಿದ್ದಾಗಲೆಲ್ಲ ಅದನ್ನು ಮೆಲ್ಲುತ್ತಿರುತ್ತಾರೆ. ಟಿವಿ ವೀಕ್ಷಿಸುತ್ತ ಹುರಿದ ಕಡಲೆಕಾಳುಗಳನ್ನು ಎಂಜಾಯ್‌ ಮಾಡ್ತಾರೆ. ಆದರೆ ದೈನಂದಿನ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ವಿಶೇಷವಾಗಿ ಚಳಿಗಾಲದಲ್ಲಿ ಹುರಿದ ಕಡಲೆಕಾಳು ತುಂಬಾ ಪ್ರಯೋಜನಕಾರಿ.

ಇದು ರುಚಿಕರ ಅಷ್ಟೇ ಅಲ್ಲ, ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಹೆಚ್ಚಿನ ಪ್ರಮಾಣದ ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಹುರಿದ ಕಡಲೆಕಾಳುಗಳಲ್ಲಿರುತ್ತವೆ. ಇದು ತುಂಬಾ ಪೌಷ್ಟಿಕ ಆಹಾರವಾಗಿದೆ. ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪ್ರತಿದಿನ 100 ಗ್ರಾಂ ಹುರಿದ ಕಡಲೆಕಾಳುಗಳನ್ನು ಸೇವಿಸುವುದು ಉತ್ತಮ.

ಹುರಿದ ಕಡಲೆ ಕಾಳುಗಳಲ್ಲಿ ಹೆಚ್ಚಿನ ಫೈಬರ್ ಅಂಶವಿದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಹುರಿದ ಕಡಲೆಯಲ್ಲಿ ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಅಂಶವಿರುತ್ತದೆ. ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಪ್ರೋಟೀನ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಕೊಬ್ಬುಗಳು ಹೃದಯವನ್ನು ರಕ್ಷಿಸುತ್ತವೆ.

ಹುರಿದ ಕಡಲೆಯಲ್ಲಿರುವ ಹೆಚ್ಚಿನ ಪ್ರಮಾಣದ ಫೈಬರ್,  ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಫೈಬರ್ ಮಲಬದ್ಧತೆಯನ್ನು ತಡೆಯಬಲ್ಲದು. ಜೀರ್ಣಾಂಗ ವ್ಯವಸ್ಥೆಯನ್ನು ಇದು ಆರೋಗ್ಯಕರವಾಗಿರಿಸುತ್ತದೆ.

ಹುರಿದ ಕಡಲೆಯಲ್ಲಿ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳಿರುತ್ತವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಬಲ್ಲದು. ಹುರಿದ ಕಡಲೆಯಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...