ಭಾರತೀಯ ಜೀವ ವಿಮಾ ನಿಗಮದ ಮೆಗಾ ಐಪಿಓ ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲಿ ಹೊರಬೀಳಲಿದೆ. ಆದರೂ ಸಹ ಎಲ್ಐಸಿ ಪಾಲಿಸಿದಾರರು ತಮ್ಮ ಪಾನ್ ಕಾರ್ಡ್ನ್ನು ಪಾಲಿಸಿಯ ಜೊತೆಗೆ ಲಿಂಕ್ ಮಾಡುವುದು ಅತ್ಯಂತ ಅವಶ್ಯಕವಾಗಿದೆ.
ಎಲ್ಐಸಿಯು ಇತ್ತೀಚಿಗೆ ತನ್ನೆಲ್ಲ ಪಾಲಿಸಿದಾರರಿಗೆ ಅನ್ವಯವಾಗುವಂತೆ ಕಂಪನಿಯ ಮುಂಬರುವ ಐಪಿಓ ಚಂದಾದಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. ಕಂಪನಿಯ ದಾಖಲೆಗಳಲ್ಲಿ ತಮ್ಮ ಪಾನ್ ಕಾರ್ಡ್ನ್ನು ಲಿಂಕ್ ಮಾಡಿದರೆ ಮಾತ್ರ ಅದರ ಮುಂಬರುವ ಐಪಿಓದ ಚಂದಾದಾರರಾಗಬಹುದು ಎಂದು ಹೇಳಿದೆ.
ನಮ್ಮ ಪಾಲಿಸಿದಾರರ ಹಿತದೃಷ್ಟಿಯಿಂದ, LIC ದಾಖಲೆಗಳಲ್ಲಿ PAN ಅನ್ನು ನವೀಕರಿಸಲು ಪಾಲಿಸಿದಾರರಿಗೆ ಕರೆ ನೀಡುವ ಜಾಹೀರಾತುಗಳನ್ನು ನೀಡುತ್ತಿದ್ದೇವೆ ಎಂದು LIC ಹೇಳಿದೆ.
ಆನ್ಲೈನ್ನಲ್ಲಿ ಎಲ್ಐಸಿಗೆ ಪಾನ್ ಕಾರ್ಡ್ ದಾಖಲೆ ಅಪ್ಡೇಟ್ ಮಾಡಲು ಇಲ್ಲಿದೆ ಮಾರ್ಗ :
1. www.licindia.in ಅಥವಾ https://licindia.in/Home/Online-PAN-Registration ಗೆ ಭೇಟಿ ನೀಡಿ.
2. ನಿಮ್ಮ ಪಾಲಿಸಿ ಸಂಖ್ಯೆ, ಪಾನ್. ಜನ್ಮ ದಿನಾಂಕ ಹಾಗೂ ಇಮೇಲ್ ಐಡಿಯನ್ನು ನೀವು ಒದಗಿಸಬೇಕಾಗುತ್ತದೆ.
3. ಈ ಲಿಂಕ್ನಲ್ಲಿ ನೀವು ನಿಮ್ಮೆಲ್ಲ ಎಲ್ಐಸಿ ಪಾಲಿಸಿಗಳ ದಾಖಲೆಯನ್ನು ಅಪ್ಡೇಟ್ ಮಾಡಬೇಕು.
4. ನಿಮ್ಮ ಪಾಲಿಸಿಯಲ್ಲಿ ಪಾನ್ ಕಾರ್ಡ್ ಲಿಂಕ್ ಆಗಿದೆಯೋ ಅಥವಾ ಇಲ್ಲವೋ ಎಂದು ಪರಿಶೀಲಿಸಲು www.licindia.in OR https://linkpan.licindia.in/UIDSeedingWebApp/getPolicyPANStatus ಗೆ ಭೇಟಿ ನೀಡಿ.
5. ಇದನ್ನು ಹೊರತುಪಡಿಸಿ ನೀವು ಎಲ್ಐಸಿ ಏಜೆಂಟ್ನ್ನು ಸಂಪರ್ಕಿಸುವ ಮೂಲಕವೂ ಪಾನ್ ಕಾರ್ಡ್ ಲಿಂಕ್ ಮಾಡಬಹುದು.
LIC, LIC ಕಾಯ್ದೆ 1956 ರ ಅಡಿಯಲ್ಲಿ ರಚಿಸಲಾದ ಶಾಸನಬದ್ಧ ನಿಗಮವಾಗಿದೆ, ಇದು ಸಂಪೂರ್ಣವಾಗಿ ಸರ್ಕಾರದ ಒಡೆತನದ ಭಾರತದ ಪ್ರಮುಖ ಜೀವ ವಿಮಾ ಕಂಪನಿಯಾಗಿದೆ.
ಇದು ಭಾರತದ ಹೊರಗೆ ಮೂರು ಶಾಖೆಗಳನ್ನು ಹೊಂದಿದೆ – ಬ್ರಿಟನ್, ಫಿಜಿ ಮತ್ತು ಮಾರಿಷಸ್, ಸಿಂಗಾಪುರದಲ್ಲಿ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಮತ್ತು ಬಹ್ರೇನ್, ಕೀನ್ಯಾ, ಶ್ರೀಲಂಕಾ, ನೇಪಾಳ, ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶದಲ್ಲಿ ಜಂಟಿ ಉದ್ಯಮಗಳನ್ನು ಹೊಂದಿದೆ.