alex Certify ಏರ್ ಬಲೂನ್‌ ನಡುವೆ ಹಗ್ಗದ ಮೇಲೆ ನಡೆದ ವ್ಯಕ್ತಿಯಿಂದ ಗಿನ್ನಿಸ್ ವಿಶ್ವದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ ಬಲೂನ್‌ ನಡುವೆ ಹಗ್ಗದ ಮೇಲೆ ನಡೆದ ವ್ಯಕ್ತಿಯಿಂದ ಗಿನ್ನಿಸ್ ವಿಶ್ವದಾಖಲೆ

Viral Video: Man Walks On a Rope Between Two Hot Air Balloons, Breaks World Record. Watchಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಇನ್ಸ್ಟಾಗ್ರಾಂ ಪುಟದಲ್ಲಿ ಮನಸೆಳೆಯುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತದೆ. ಸಾಧಕರು ನಿರ್ಭಯವಾಗಿ ತಮ್ಮ ಮಿತಿಗಳನ್ನು ಮೀರುವ ಈ ಹಲವು ವಿಡಿಯೋಗಳನ್ನು ವೀಕ್ಷಿಸಲು ಸ್ಪೂರ್ತಿದಾಯಕವಾಗಿದೆ.

ಇದೀಗ ಅಂತಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಎರಡು ಏರ್ ಬಲೂನ್‌ಗಳ ನಡುವೆ ಕಟ್ಟಲಾದ ಹಗ್ಗದ ಮೇಲೆ ಬರಿಗಾಲಿನಲ್ಲಿ ನಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ.

ರಾಫೆಲ್ ಜುಗ್ನೋ ಬ್ರಿಡಿ ಎಂಬುವವರು, 1,901 ಮೀಟರ್ ಅಂದರೆ ಸುಮಾರು 6,236 ಅಡಿಗಳಷ್ಟು ಎತ್ತರದಲ್ಲಿ ಈ ದಾಖಲೆ ಮಾಡಿದ್ದಾರೆ. ರಾಫೆಲ್ ಒಂದು ಏರ್ ಬಲೂನ್‌ನಿಂದ ಇನ್ನೊಂದಕ್ಕೆ ತಲುಪಲು ಹಗ್ಗದ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾ ಈ ಸಾಧನೆ ಮಾಡಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮೈ ಜುಮ್ಮೆಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...