alex Certify ಏಮ್ಸ್​​ನಿಂದ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಡಿಸ್ಚಾರ್ಜ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಮ್ಸ್​​ನಿಂದ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಡಿಸ್ಚಾರ್ಜ್​

ರಾಂಚಿಯಿಂದ ತಡರಾತ್ರಿ ದೆಹಲಿಯ ಏಮ್ಸ್​​ಗೆ ಶಿಫ್ಟ್​ ಆಗಿದ್ದ ಆರ್​​ಜೆಡಿ ನಾಯಕ ಲಾಲು ಪ್ರಸಾದ್​ ಯಾದವ್​​​​ರನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಮುಂಜಾನೆ 3 ಗಂಟೆಗೆ ಡಿಸ್ಚಾರ್ಜ್​ ಮಾಡುವ ಮುನ್ನ ಅವರನ್ನು ರಾತ್ರಿಯಿಡೀ ಐಸಿಯುವಿನಲ್ಲಿ ಇಡಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಲಾಲು ಆರೋಗ್ಯ ಹದಗೆಟ್ಟಿದ್ದರಿಂದ ರಾಂಚಿಯ ರಿಮ್ಸ್​ನಿಂದ ಅವರನ್ನು ಏಮ್ಸ್​​ಗೆ ಶಿಫ್ಟ್​ ಮಾಡಲಾಗಿದೆ.
ಲಾಲು ಯಾದವ್​​​ರನ್ನು ರಾತ್ರಿಯಿಡೀ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಲಾಲುರನ್ನು ಮೌಲ್ಯಮಾಪನ ಮಾಡಲಾಗಿದೆ. ಸುಮಾರು 3 ಗಂಟೆಗೆ ಅವರನ್ನು ಡಿಸ್ಚಾರ್ಜ್​ ಮಾಡಲಾಗಿದೆ ಎಂದು ಆಸ್ಪತ್ರೆಗಳು ಮೂಲಗಳು ತಿಳಿಸಿವೆ.
73 ವರ್ಷದ ಬಿಹಾರದ ಮಾಜಿ ಸಿಎಂ ಇಂದು ಮಧ್ಯಾಹ್ನದ ಸುಮಾರಿಗೆ ರಾಂಚಿಗೆ ಮರಳಲಿದ್ದಾರೆ. ಈ ವೇಳೆ ಪುತ್ರಿ ಹಾಗೂ ರಾಜ್ಯಸಭಾ ಸಂಸದೆ ಮಿಸಾ ಭಾರತಿ ಕೂಡ ಇರಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...