ರಾಂಚಿಯಿಂದ ತಡರಾತ್ರಿ ದೆಹಲಿಯ ಏಮ್ಸ್ಗೆ ಶಿಫ್ಟ್ ಆಗಿದ್ದ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಮುಂಜಾನೆ 3 ಗಂಟೆಗೆ ಡಿಸ್ಚಾರ್ಜ್ ಮಾಡುವ ಮುನ್ನ ಅವರನ್ನು ರಾತ್ರಿಯಿಡೀ ಐಸಿಯುವಿನಲ್ಲಿ ಇಡಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಲಾಲು ಆರೋಗ್ಯ ಹದಗೆಟ್ಟಿದ್ದರಿಂದ ರಾಂಚಿಯ ರಿಮ್ಸ್ನಿಂದ ಅವರನ್ನು ಏಮ್ಸ್ಗೆ ಶಿಫ್ಟ್ ಮಾಡಲಾಗಿದೆ.
ಲಾಲು ಯಾದವ್ರನ್ನು ರಾತ್ರಿಯಿಡೀ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಲಾಲುರನ್ನು ಮೌಲ್ಯಮಾಪನ ಮಾಡಲಾಗಿದೆ. ಸುಮಾರು 3 ಗಂಟೆಗೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆಗಳು ಮೂಲಗಳು ತಿಳಿಸಿವೆ.
73 ವರ್ಷದ ಬಿಹಾರದ ಮಾಜಿ ಸಿಎಂ ಇಂದು ಮಧ್ಯಾಹ್ನದ ಸುಮಾರಿಗೆ ರಾಂಚಿಗೆ ಮರಳಲಿದ್ದಾರೆ. ಈ ವೇಳೆ ಪುತ್ರಿ ಹಾಗೂ ರಾಜ್ಯಸಭಾ ಸಂಸದೆ ಮಿಸಾ ಭಾರತಿ ಕೂಡ ಇರಲಿದ್ದಾರೆ.