alex Certify ‘ಏಕ್ ಔರ್ ಸೆಲ್ಫಿ ಲೆನೆ ದೋ’ ಎನ್ನುತ್ತಾ ಇಂಟರ್ನೆಟ್‍ಗೆ ಮರಳಿದ ಡಿಂಚಕ್ ಪೂಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಏಕ್ ಔರ್ ಸೆಲ್ಫಿ ಲೆನೆ ದೋ’ ಎನ್ನುತ್ತಾ ಇಂಟರ್ನೆಟ್‍ಗೆ ಮರಳಿದ ಡಿಂಚಕ್ ಪೂಜಾ

ಧಿಂ

ಡಿಂಚಕ್ ಪೂಜಾ ಹೆಸರು ಕೇಳಿದ್ದು ನೆನಪಿದೆಯೇ..? ಡಿಂಚಕ್ ಪೂಜಾ ಎಂದೇ ಜನಪ್ರಿಯರಾಗಿರುವ ಪೂಜಾ ಜೈನ್ ಅವರು 2017 ರಲ್ಲಿ ತಮ್ಮ ಸೆಲ್ಫಿ ಮೈನೆ ಲೇ ಲಿ, ಸ್ವಾಗ್ ವಾಲಿ ಟೋಪಿ ಹಾಡುಗಳಿಗಾಗಿ ವೈರಲ್ ಆಗಿದ್ದರು. ಇದೀಗ ಮತ್ತೆ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಇದೀಗ ಮತ್ತೆ ಹೊಸ ಹಾಡಿನೊಂದಿಗೆ ಡಿಂಚಕ್ ಪೂಜಾ ಕಾಣಿಸಿಕೊಂಡಿದ್ದಾರೆ. ಏಕ್ ಔರ್ ಸೆಲ್ಫಿ ಲೆನೆ ದೋ ಎಂಬ ಶೀರ್ಷಿಕೆಯ ಮತ್ತೊಂದು ಸಂಗೀತ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹೊಸ ಮ್ಯೂಸಿಕ್ ವಿಡಿಯೋದಲ್ಲಿ ಪೂಜಾ ಐಫೆಲ್ ಟವರ್ ಮತ್ತು ಸ್ಟ್ಯಾಚ್ಯೂ ಆಫ್ ಲಿಬರ್ಟಿಯ ಪ್ರತಿಕೃತಿಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ರಾತ್ ಕೆ ಬಾಜ್ ಗೇ ಏಕ್ ಯಾ ದೋ, ಏಕ್ ಔರ್ ಸೆಲ್ಫಿ ಲೆನೆ ದೋ ಎಂದು ಹಾಡುತ್ತಾ ಪ್ರತಿಕೃತಿ ಸ್ಮಾರಕಗಳ ಮುಂದೆ ಫೋನ್ ಮೂಲಕ ಪೋಸ್ ನೀಡಿದ್ದಾರೆ.

ಈ ವಿಡಿಯೋವನ್ನು 30,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಆದರೆ, ಕಾಮೆಂಟ್ ವಿಭಾಗವನ್ನು ಆಫ್ ಮಾಡಲಾಗಿದೆ. ಡಿಂಚಕ್ ಪೂಜಾ ಕೆಲವು ಚಮತ್ಕಾರಿ ಸಾಹಿತ್ಯದೊಂದಿಗೆ ಹಲವಾರು ಇತರ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಜನವರಿಯಲ್ಲಿ, ಅವರು ಐ ಆಮ್ ಎ ಬೈಕರ್ ಶೀರ್ಷಿಕೆಯ ವಿಡಿಯೋವನ್ನು ಹಂಚಿಕೊಂಡಿದ್ದರು. ಅಲ್ಲಿ ಅವರು ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿದ್ದರು. ಪೂಜಾ 2020 ರಲ್ಲಿ ಕೊರೋನಾ ಹಾಡಿನ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...