alex Certify ಎಸ್.ಆರ್.ಶ್ರೀನಿವಾಸ್ ಗೆ ಕಾಂಗ್ರೆಸ್ ಬಹಿರಂಗ ಆಹ್ವಾನ; ಪಕ್ಷಕ್ಕೆ ಬಂದ್ರೆ ಗುಬ್ಬಿ ಕ್ಷೇತ್ರದ ಅಭ್ಯರ್ಥಿ ಅವರೆ ಎಂದ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಸ್.ಆರ್.ಶ್ರೀನಿವಾಸ್ ಗೆ ಕಾಂಗ್ರೆಸ್ ಬಹಿರಂಗ ಆಹ್ವಾನ; ಪಕ್ಷಕ್ಕೆ ಬಂದ್ರೆ ಗುಬ್ಬಿ ಕ್ಷೇತ್ರದ ಅಭ್ಯರ್ಥಿ ಅವರೆ ಎಂದ ಸಿದ್ದರಾಮಯ್ಯ

ತುಮಕೂರು: ಎಸ್.ಆರ್.ಶ್ರೀನಿವಾಸ್ ಅವರಿಗೆ ಪಕ್ಷಕ್ಕೆ ಬಹಿರಂಗವಾಗಿ ಆಹ್ವಾನ ನೀಡಿರುವ

ವಿಪಕ್ಷ ನಾಯಕ ಸಿದ್ದರಾಮಯ್ಯ,ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ ಗೆ ಬಂದರೆ ಗುಬ್ಬಿ ಕ್ಷೇತ್ರದಿಂದ ಅವರನ್ನೇ ಅಭ್ಯರ್ಥಿ ಮಾಡುವುದಾಗಿ ಘೋಷಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಎಸ್.ಆರ್.ಶ್ರೀನಿವಾಸ್, ಕಾಂಗ್ರೆಸ್ ಗೆ ಬಂದರೆ ಮುಂಬರುವ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸುವುದಾಗಿ ತಿಳಿಸಿದರು.

ಪವರ್ ಸ್ಟಾರ್ ಹೃದಯಾಘಾತದ ಬೆನ್ನಲ್ಲೇ ಆತಂಕಕ್ಕೀಡಾದ ಜನ; ಜಿಮ್ ಬಿಟ್ಟು ಆಸ್ಪತ್ರೆಗಳತ್ತ ಮುಖಮಾಡಿದ ಯುವಕರು

ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ನಾನು ಏನಾದರೂ ಹೇಳಿದರೆ ಕುಮಾರಸ್ವಾಮಿ ಜಾತಿಬಣ್ಣ ಹಚ್ಚುತ್ತಿದ್ದಾರೆ. ನಾನು ಅಕ್ಕಿ ಕೊಟ್ಟಿದ್ದೆ. ಆದರೆ ಅದಕ್ಕೂ ಜಾತಿ ಬಣ್ಣ ಹಚ್ಚಿದ್ದಾರೆ. ಒಂದು ಸಮುದಾಯಕ್ಕಾಗಿ ನಾನು ಅಕ್ಕಿ ಕೊಟ್ಟಿರಲಿಲ್ಲ. ಹಸಿವು ನೀಗಿಸಲು 1 ಕೋಟಿ 20 ಲಕ್ಷ ಕುಟುಂಬಗಳಿಗೆ ಅಕ್ಕಿ ಕೊಟ್ಟಿದ್ದೇವೆ. ಉಚಿತ ಅಕ್ಕಿ ನೀಡಿದ ಸರ್ಕಾರವಿದ್ದರೆ ಅದು ನಮ್ಮ ಸರ್ಕಾರ ಎಂದರು.

ಬಿಜೆಪಿ ನಾಯಕರು ಪ್ರಧಾನಿ ಮೋದಿ ಸರ್ಕಾರ ನೀಡಿದ ಅಕ್ಕಿ ಎನ್ನುತ್ತಿದ್ದಾರೆ. ಹಾಗಾದರೆ ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಲ್ಲಿ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...