ಮುಖದ ಅಂದ ಡಲ್ ಆಗಿದ್ದರೆ ಎಷ್ಟೇ ದುಬಾರಿ ಉಡುಪು ತೊಟ್ಟರೂ ಸುಂದರವಾಗಿ ಕಾಣುವುದಿಲ್ಲ.
ಪಾರ್ಲರ್ ಗಳಿಗೆ ಹೋಗಿ ಫೇಶಿಯಲ್, ಬ್ಲೀಚ್ ಮಾಡಿಸಿಕೊಂಡು ಬಂದರೆ ಅದು ಕೂಡ ಕೆಲವೇ ದಿನಗಳವರೆಗೆ ಮಾತ್ರ ಇರುತ್ತದೆ. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಎರಡೇ ದಿನದಲ್ಲಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ ಕಾಂತಿಯುತವಾದ ಚರ್ಮ ನಿಮ್ಮದಾಗಿಸಿಕೊಳ್ಳಬಹುದು.
1 ಟೇಬಲ್ ಸ್ಪೂನ್ ಕಡಲೆ ಹಿಟ್ಟು ತೆಗೆದುಕೊಳ್ಳಿ ಅದಕ್ಕೆ ಕೆಲವೇ ಹನಿ ಲಿಂಬೆ ರಸ ಹಾಕಿ ¼ ಟೇಬಲ್ ಸ್ಪೂನ್ ನಷ್ಟು ಅರಿಶಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ನಿಮ್ಮ ಮುಖದ ಎಲ್ಲಾ ಭಾಗಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೇಯೇ ಬಿಡಿ. ನಂತರ ಕೈಯನ್ನು ಒದ್ದೆ ಮಾಡಿಕೊಂಡು ವರ್ತುಲಾಕಾರದಲ್ಲಿ ಮಸಾಜ್ ಮಾಡಿ ನಂತರ ಮುಖ ತೊಳೆದುಕೊಳ್ಳಿ.
ಇನ್ನು ಅಲೋವೆರಾ ಜೆಲ್ -3 ಟೇಬಲ್ ಸ್ಪೂನ್ ತೆಗೆದುಕೊಳ್ಳಿ ಅದಕ್ಕೆ ವಿಟಮಿನ್ ಆಯಿಲ್ ಡ್ರಾಪ್ಸ್ ಹಾಕಿ . ಇವೆರೆಡನ್ನೂ ಮಿಶ್ರಣ ಮಾಡಿ ಮುಖಕ್ಕೆ ನಿಧಾನಕ್ಕೆ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೇಯೇ ಬಿಡಿ. ಬೆಳಿಗ್ಗೆ ಮುಖ ತೊಳೆಯಿರಿ.
ಕಿತ್ತಳೆ ಹಣ್ಣಿನ ಸಿಪ್ಪೆ-1/2 ಟೇಬಲ್ ಸ್ಪೂನ್, ಹಾಲು-1 ಟೇಬಲ್ ಸ್ಪೂನ್. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಡಿ. ನಂತರ ಮುಖ ತೊಳೆದರೆ ಮುಖ ಕಾಂತಿಯುತವಾಗುತ್ತದೆ.
ಇದರ ಜೊತೆಗೆ ಹಣ್ಣು, ತರಕಾರಿ, ಮೊಳಕೆ ಕಾಳು, ನೀರನ್ನು ಚೆನ್ನಾಗಿ ಸೇವಿಸಿ. ಇದು ಕೂಡ ದೇಹದಲ್ಲಿನ ಟಾಕ್ಸಿನ್ ಹೊರಕ್ಕೆ ಹಾಕಿ ಮುಖದ ಅಂದ ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ.