
ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಐವರು ಎಮ್ಮೆ ಹಿಂದೆ ಗಾಡಿ ಕಟ್ಟಿ ಅದರಲ್ಲಿ ಕುಳಿತು ಸವಾರಿ ಮಾಡಿದ್ದಾರೆ. ಕುದುರೆ ಗಾಡಿಯಲ್ಲಿ ಸವಾರಿ ಮಾಡುತ್ತಿದ್ದ ಮತ್ತಿಬ್ಬರು ಪುರುಷರೊಂದಿಗೆ ಈ ಐವರು ರೇಸ್‌ನಲ್ಲಿರುವಂತೆ ತೋರುತ್ತಿದೆ. ಬೈಕ್‌ನಲ್ಲಿ ಬಂದ ಇನ್ನೂ ಕೆಲವರು ಹಾರ್ನ್ ಮಾಡುತ್ತಾ ಇವರನ್ನು ಹಿಂಬಾಲಿಸಿದ್ದಾರೆ.
ಎಮ್ಮೆಯನ್ನು ಮತ್ತಷ್ಟು ವೇಗವಾಗಿ ಓಡಲು ಪ್ರಯತ್ನಿಸುವ ಸಲುವಾಗಿ ಪ್ರಾಣಿಗೆ ಹೊಡೆದಿದ್ದಾನೆ. ಮತ್ತಷ್ಟು ಹೊಡೆತಗಳನ್ನು ನೀಡಿದಾಗ ಏಕಾಏಕಿ ಎಮ್ಮೆ ವೇಗವಾಗಿ ಬಲಕ್ಕೆ ತಿರುಗಿದೆ. ಈ ವೇಳೆ ಒಂದು ಚಕ್ರವು ರಸ್ತೆ ವಿಭಜಕವನ್ನು ಹೊಡೆದಿದೆ. ಈ ವೇಳೆ ಸವಾರಿ ಮಾಡುತ್ತಿದ್ದ ಐವರೂ ಕೂಡ ರಸ್ತೆಯ ಮಧ್ಯದಲ್ಲಿ ಬಿದ್ದಿದ್ದಾರೆ. ಭಯದಿಂದ ಎಮ್ಮೆ ಅಲ್ಲಿಂದ ಓಡಿ ಹೋಗಿದೆ.
ಈ ಹಳೆ ವಿಡಿಯೋ ಮತ್ತೆ ವೈರಲ್ ಆಗಿದ್ದು, ಅವರು ಮಾಡಿದ ಕರ್ಮಕ್ಕೆ ತಕ್ಕ ಶಿಕ್ಷೆಯನ್ನು ಪಡೆದಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಲು ತೃಪ್ತಿ ಸಿಗುತ್ತದೆ ಅಂತಾ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ತನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ಅಂತ್ಯವಾಗಿದೆ ಕರ್ಮ ಹಿಟ್ಸ್ ಬ್ಯಾಕ್ ಅಂತಾ ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.