alex Certify ಎದೆ ನಡುಗಿಸುವಂತಿದೆ ಅಪಘಾತದ ದೃಶ್ಯಾವಳಿ; ಹೆಲ್ಮೆಟ್‌ ಎಷ್ಟು ಮುಖ್ಯ ಅನ್ನೋದನ್ನು ಸಾಬೀತುಪಡಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುವಂತಿದೆ ಅಪಘಾತದ ದೃಶ್ಯಾವಳಿ; ಹೆಲ್ಮೆಟ್‌ ಎಷ್ಟು ಮುಖ್ಯ ಅನ್ನೋದನ್ನು ಸಾಬೀತುಪಡಿಸುತ್ತೆ ಈ ವಿಡಿಯೋ

ಉಡುಪಿ: ಬೈಕ್ ಸವಾರರಿಗೆ ಹೆಲ್ಮೆಟ್ ಎಷ್ಟು ಮುಖ್ಯ ಎಂಬುದಕ್ಕೆ ಈ ಅಪಘಾತದ ದೃಶ್ಯವೇ ಸಾಕ್ಷಿ. ದ್ವಿಚಕ್ರ ವಾಹನದಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದ ಮಹಿಳೆಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಹೆಲ್ಮೆಟ್ ನಿಂದಾಗಿ ಮಹಿಳೆ ಬದುಕುಳಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಬೈಕ್ ನಲ್ಲಿ ಬಂದ ಮಹಿಳೆ ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಬಸ್ ಒಂದು ಬಂದಿದೆ. ಮಹಿಳೆ ಬಸ್ ಬಂದಿದೆ ಎಂದು ರಸ್ತೆ ಕ್ರಾಸ್ ಮಾಡದೇ ನಿಂತಿದ್ದಾರೆ. ಆದರೆ ಆ ಬಸ್ ಪ್ರಯಾಣಿಕರನ್ನು ಇಳಿಸಲೆಂದು ಅಲ್ಲಿಯೇ ನಿಂತಿದೆ. ಇದನ್ನು ಅರಿತ ಮಹಿಳೆ ರಸ್ತೆ ಕ್ರಾಸ್ ಮಾಡಲು ಮುಂದಾಗಿದ್ದಾರೆ. ಆದರೆ ಬಸ್ ಹಿಂದಿನಿಂದ ವೇಗವಾಗಿ ಬಂದ ವಾಹನವೊಂದು ಮಹಿಳೆಗೆ ಡಿಕ್ಕಿ ಹೊಡೆದಿದೆ.

ಬೈಕ್ ಸಮೇತ ಮಹಿಳೆ ನಡುರಸ್ತೆಯಲ್ಲಿ ಬಿದ್ದಿದ್ದಾರೆ. ಮಹಿಳೆಯ ತಲೆ ರಸ್ತೆಗೆ ಗುದ್ದಿದೆ. ಅದೃಷ್ಟವಶಾತ್ ಹೆಲ್ಮೆಟ್ ನಿಂದಾಗಿ ಮಹಿಳೆಯ ತಲೆಯ ಭಾಗಕ್ಕೆ ಪೆಟ್ಟಾಗಿಲ್ಲ. ತಕ್ಷಣ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...