ತಾಯಿಯ ಹಾಲಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು, ಬೆಳವಣಿಗೆಗೆ ಅನುಕೂಲವಾಗುವ ಅನೇಕ ಅಂಶಗಳಿರುತ್ತವೆ. ಭೌತಿಕವಾಗಿ ಬೆಳೆಯುವುದರೊಂದಿಗೆ ಮಾನಸಿಕ ವಿಕಾಸ ಪಡೆಯಲು ಸಾಧ್ಯವಾಗುತ್ತದೆ.
ತಾಯಿಯ ಹಾಲಿಗೆ ಪರ್ಯಾಯವಾಗಿ ಮಾರ್ಕೆಟ್ ನಲ್ಲಿ ಅನೇಕ ತರಹದ ಫಾರ್ಮುಲಾ ಫೀಡ್ಸ್ ಇವೆ. ಆದರೆ ಅವು ಯಾವುದು ತಾಯಿ ಹಾಲಿಗೆ ಸಾಟಿಯಲ್ಲ. ಸ್ವಾಭಾವಿಕವಾದ ತಾಯಿ ಹಾಲು ಕೊಡುವಂತಹ ಪೋಷಕಗಳು ಹಾಗೂ ಸಮೃದ್ಧಿಯನ್ನು ಕೊಡಲು ಸಾಧ್ಯವಿಲ್ಲ. ಹಾಗಾದ್ರೆ ಎದೆಹಾಲಿನಿಂದ ಮಗುವಿಗೆ ಏನೆಲ್ಲಾ ಅನುಕೂಲಗಳಾಗುತ್ತವೆ ನೋಡೋಣ.
ಪುಟ್ಟ ಕಂದನನ್ನು ನಕ್ಕು ನಗಿಸಿದ ಶ್ವಾನ: ಕ್ಯೂಟ್ ವಿಡಿಯೋಗೆ ಮನಸೋತ ನೆಟ್ಟಿಗರು
ಪ್ರೋಟಿನ್ ಮತ್ತು ಅಮೈನೋ ಆಸಿಡ್ ಗಳು
ಎದೆ ಹಾಲಿನಲ್ಲಿರುವ ಪ್ರೊಟೀನ್ ಮತ್ತು ಅಮೈನೋ ಆಸಿಡ್ ಗಳು ಮಗುವಿನ ಬೆಳವಣಿಗೆಗೆ ಪೂರಕವಾಗುತ್ತದೆ.
ವಿಟಮಿನ್ ಗಳು
ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಖನಿಜಾಂಶಗಳು
ಕ್ಯಾಲ್ಸಿಯಂ, ಪೊಟಾಸಿಯಂ, ಸೋಡಿಯಂ ಕ್ಲೋರೈಡ್ ಮತ್ತು ಫಾಸ್ಪೇಟ್ ಸಮ ಪ್ರಮಾಣದಲ್ಲಿ ದೊರೆಯುತ್ತದೆ.
ಲ್ಯಾಕ್ಟೋಸ್
ಮಗುವಿಗೆ ಕಬ್ಬಿಣಾಂಶವನ್ನು ಸಕ್ರಿಯವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪುವಂತೆ ಮಾಡುತ್ತದೆ.
ರೋಗ ನಿರೋಧಕ ಅಂಶಗಳು
ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಅಂಟುರೋಗಗಳು, ಅಲರ್ಜಿ, ಬೇಧಿ, ಶ್ವಾಸಕೋಶದ ಸಮಸ್ಯೆ, ಸಕ್ಕರೆ ಕಾಯಿಲೆ, ಆಮಶಂಕೆ ಮುಂತಾದ ರೋಗಗಳು ಬರದಂತೆ ತಡೆಗಟ್ಟುತ್ತದೆ.