ಎಥೆನಾಲ್ ಮಾತ್ರವಲ್ಲ ವಿದ್ಯುತ್ ಬಳಕೆಯಿಂದಲೂ ಓಡುತ್ತೆ ಈ ಕಾರು…! 12-10-2022 9:39AM IST / No Comments / Posted In: Automobile News, Car Reviews, Latest News, India, Live News ಮಾಲಿನ್ಯ ನಿಯಂತ್ರಣಕ್ಕಾಗಿ ದೇಶದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಪೈಕಿ ಎಲೆಕ್ಟ್ರಿಕ್ ವಾಹನಗಳ ಬಳಕೆಯೂ ಒಂದು. ಇದೀಗ ಟೊಯೋಟಾ ಕಂಪನಿ ಕಾರೊಂದನ್ನು ಅಭಿವೃದ್ಧಿಪಡಿಸಿದ್ದು, ಇದು ಎಥೆನಾಲ್ ಮಾತ್ರವಲ್ಲದೆ ವಿದ್ಯುತ್ ಬಳಕೆಯಿಂದಲೂ ಚಲಿಸುತ್ತದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರದಂದು ಈ ಹೈಬ್ರಿಡ್ ಕಾರನ್ನು ಅನಾವರಣಗೊಳಿಸಿದ್ದು, ಕೊರೊಲಾ ಆಲ್ವಿಸ್ ಎಫ್ ಎಫ್ ವಿ -ಎಸ್ ಹೆಚ್ ಇ ವಿ ಹೆಸರಿನ ಈ ಕಾರು ಪ್ರಯೋಗಾರ್ಥವಾಗಿ ಅನಾವರಣ ಮಾಡಲಾಗಿದೆ. ಈ ಕಾರಿನಲ್ಲಿ ವಿದ್ಯುತ್ ಚಾಲಿತ ಮೋಟಾರ್ ಜೊತೆಗೆ ಜೈವಿಕ ಇಂಧನ ಬಳಸುವ ಎಂಜಿನ್ ಅಳವಡಿಸಲಾಗಿದ್ದು, ಹೀಗಾಗಿ ವಿದ್ಯುತ್ ಜೊತೆಗೆ ಎಥೆನಾಲ್ ಬಳಕೆಯಿಂದಲೂ ಚಲಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಕಾರುಗಳನ್ನು ರಸ್ತೆಗಿಳಿಸುವ ಯೋಜನೆ ಟೊಯೋಟೊ ಕಂಪನಿಗಿದೆ. Today our dream has come true…!Launched India’s first Flexi-Fuel Strong Hybrid Electric Vehicles (FFV-SHEV) which would run on 100% petrol as well as 20 to 100% blended ethanol and electric powertain with… pic.twitter.com/QmsrnXD1Qx — Nitin Gadkari (मोदी का परिवार) (@nitin_gadkari) October 11, 2022 https://hindi.tezzbuzz.com/2022/10/12/nitin-gadkari-launched-the-countrys-first-ethanol-powered-car-know/