alex Certify ಎಎಪಿಯ ಭಗವಂತ್ ಮಾನ್ ಪ್ರಚಾರದ ಹಾಡಿಗೆ ಪಂಜಾಬ್ ಸಿಎಂ ಚನ್ನಿ ಸಖತ್ ಸ್ಟೆಪ್ಸ್: ಎಡಿಟ್‌ ಮಾಡಿದ ವಿಡಿಯೋ ಹಂಚಿಕೊಂಡ ಆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಎಪಿಯ ಭಗವಂತ್ ಮಾನ್ ಪ್ರಚಾರದ ಹಾಡಿಗೆ ಪಂಜಾಬ್ ಸಿಎಂ ಚನ್ನಿ ಸಖತ್ ಸ್ಟೆಪ್ಸ್: ಎಡಿಟ್‌ ಮಾಡಿದ ವಿಡಿಯೋ ಹಂಚಿಕೊಂಡ ಆಪ್

ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ಚುನಾವಣಾ ಕಣ ರಂಗೇರಿದೆ. ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಕಣಕ್ಕಿಳಿಯಲು ಸಿದ್ಧವಾಗಿದೆ. ಎಎಪಿಯ ಪ್ರಚಾರ ಗೀತೆ ಇಕ್ ಮೌಕಾ ಕೇಜ್ರಿವಾಲ್ ತೇ ಭಗವಂತ್ ಮನ್ ನು ಹಾಡಿನ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು, ಇದರಲ್ಲಿ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಡ್ಯಾನ್ಸ್ ಮಾಡುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ.

ಫೆಬ್ರವರಿ 6 ರಂದು ಕಾಂಗ್ರೆಸ್ ತನ್ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚರಂಜಿತ್ ಸಿಂಗ್ ಚನ್ನಿ ಅವರ ಹೆಸರನ್ನೇ ಘೋಷಿಸಿದೆ. ಎಎಪಿಯಿಂದ ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನ್ ಅವರನ್ನು ಸಾರ್ವಜನಿಕ ಸಮೀಕ್ಷೆಯ ನಂತರ ಆಯ್ಕೆ ಮಾಡಲಾಗಿದೆ. ಈ ನಡುವೆ ಎಡಿಟ್ ಮಾಡಿರೋ ಡ್ಯಾನ್ಸ್ ವಿಡಿಯೋವನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ ಎಎಪಿ, ಚನ್ನಿ ಅವರಲ್ಲಿರುವ ನರ್ತನವು ಇಕ್ ಮೌಕಾ ಕೇಜ್ರಿವಾಲ್ ತೆ ಭಗವಂತ್ ಮನ್ ಗೆ ಕುಣಿಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಶೀರ್ಷಿಕೆ ನೀಡಿದೆ. ಸಹಜವಾಗಿ, ಇದು ಎಡಿಟ್ ಮಾಡಿದ ವಿಡಿಯೋವಾಗಿದೆ.

ಕಾಂಗ್ರೆಸ್‌ನ ರಾಷ್ಟ್ರೀಯ ಸಂಯೋಜಕ ನಿತಿನ್ ಅಗರ್ವಾಲ್ ಅವರು ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ರಂಜಿಸಲ್ಪಟ್ಟಿದ್ದಾರೆ.

— AAP (@AamAadmiParty) February 17, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...