
ಫೆಬ್ರವರಿ 6 ರಂದು ಕಾಂಗ್ರೆಸ್ ತನ್ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚರಂಜಿತ್ ಸಿಂಗ್ ಚನ್ನಿ ಅವರ ಹೆಸರನ್ನೇ ಘೋಷಿಸಿದೆ. ಎಎಪಿಯಿಂದ ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನ್ ಅವರನ್ನು ಸಾರ್ವಜನಿಕ ಸಮೀಕ್ಷೆಯ ನಂತರ ಆಯ್ಕೆ ಮಾಡಲಾಗಿದೆ. ಈ ನಡುವೆ ಎಡಿಟ್ ಮಾಡಿರೋ ಡ್ಯಾನ್ಸ್ ವಿಡಿಯೋವನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ ಎಎಪಿ, ಚನ್ನಿ ಅವರಲ್ಲಿರುವ ನರ್ತನವು ಇಕ್ ಮೌಕಾ ಕೇಜ್ರಿವಾಲ್ ತೆ ಭಗವಂತ್ ಮನ್ ಗೆ ಕುಣಿಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಶೀರ್ಷಿಕೆ ನೀಡಿದೆ. ಸಹಜವಾಗಿ, ಇದು ಎಡಿಟ್ ಮಾಡಿದ ವಿಡಿಯೋವಾಗಿದೆ.
ಕಾಂಗ್ರೆಸ್‌ನ ರಾಷ್ಟ್ರೀಯ ಸಂಯೋಜಕ ನಿತಿನ್ ಅಗರ್ವಾಲ್ ಅವರು ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ರಂಜಿಸಲ್ಪಟ್ಟಿದ್ದಾರೆ.