alex Certify ಎಂಜಲು ಮಾಡಿದ ಆಹಾರವನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ, ಹೆಚ್ಚುವುದು ಪ್ರೀತಿಯಲ್ಲ, ಕಾಯಿಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂಜಲು ಮಾಡಿದ ಆಹಾರವನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ, ಹೆಚ್ಚುವುದು ಪ್ರೀತಿಯಲ್ಲ, ಕಾಯಿಲೆ….!

ಒಂದೇ ತಟ್ಟೆಯಲ್ಲಿ ಊಟ ಮಾಡುವುದು, ಜ್ಯೂಸ್‌ ಅಥವಾ ಎಳನೀರಲ್ಲಿ ಎರಡು ಸ್ಟ್ರಾ ಹಾಕಿಕೊಂಡು ಪರಸ್ಪರ ಹಂಚಿಕೊಂಡು ಕುಡಿಯುವ ಅಭ್ಯಾಸ ಅನೇಕ ಜೋಡಿಗಳಿಗೆ ಇದೆ. ಒಟ್ಟಿಗೆ ಒಂದೇ ತಟ್ಟೆಯಲ್ಲಿ ತಿನ್ನುವುದರಿಂದ ಪ್ರೀತಿ ಬೆಳೆಯುತ್ತದೆ ಎಂಬ ಭಾವನೆ ಹಲವರದ್ದು. ಪತಿ ಊಟ ಮಾಡಿದ ತಟ್ಟೆಯಲ್ಲೇ ಪತ್ನಿ ಕೂಡ ತಿನ್ನುವ ಪದ್ಧತಿ ಹಳೆಯ ಕಾಲದಲ್ಲೂ ಇತ್ತು. ಆದರೆ ಈ ರೀತಿ ಎಂಜಲು ತಿನ್ನುವುದರಿಂದ ಪ್ರೀತಿ ಹೆಚ್ಚುವುದಿಲ್ಲ, ಬದಲಾಗಿ ಅನೇಕ ರೋಗಗಳು ಹೆಚ್ಚಾಗುವ ಅಪಾಯವಿದೆ. ಇದು ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು. ಹಾಗಾಗಿ ಯಾರ ಎಂಜಲನ್ನೂ ತಿನ್ನದಂತೆ ಆರೋಗ್ಯ ತಜ್ಞರು ಸಹ ಸಲಹೆ ನೀಡುತ್ತಾರೆ.

ಸೋಂಕಿನ ಭಯಒಂದೇ ತಟ್ಟೆಯಲ್ಲಿ ಇಬ್ಬರು ಆಹಾರ ಸೇವಿಸಿದರೆ ಸೋಂಕು ಹರಡುವ ಅಪಾಯವಿದೆ. ಯಾವುದೇ ಕಾಯಿಲೆಯಿಂದ ಸೋಂಕಿತ ವ್ಯಕ್ತಿಯ ಎಂಜಲನ್ನು ತಿನ್ನುವುದು ಅಪಾಯಕಾರಿ. ಶೀತ, ಜ್ವರ ಅಥವಾ ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಸೋಂಕುಗಳು ಎಂಜಲು ತಿನ್ನುವುದರಿಂದ ಸುಲಭವಾಗಿ ಹರಡಬಹುದು. ಆದ್ದರಿಂದಲೇ ಅನಾರೋಗ್ಯ ಪೀಡಿತ ವ್ಯಕ್ತಿಯೊಂದಿಗೆ ಒಂದೇ ತಟ್ಟೆಯಲ್ಲಿ ಆಹಾರವನ್ನು ಸೇವಿಸಬಾರದು.

ಜೀರ್ಣಕಾರಿ ಸಮಸ್ಯೆಬೇರೆಯವರ ತಟ್ಟೆಯಲ್ಲಿ ಆಹಾರ ಸೇವಿಸಿದಾಗ ಅದು ಸ್ವಚ್ಛವಾಗಿದೆಯೋ ಇಲ್ಲವೋ ಅಥವಾ ಊಟ ಬಡಿಸುವವರು ಎಷ್ಟು ಸ್ವಚ್ಛವಾಗಿ ಪಾತ್ರೆಗಳನ್ನು ಬಳಸುತ್ತಿದ್ದಾರೆ ಎಂಬುದು ತಿಳಿಯುವುದಿಲ್ಲ. ಈ ಕಾರಣದಿಂದಾಗಿ, ಆಹಾರದಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್ ಬರಬಹುದು. ಸ್ವಚ್ಛತೆಯ ಕೊರತೆಯಿಂದ ಸೂಕ್ಷ್ಮಜೀವಿಗಳು ಹೊಟ್ಟೆಯನ್ನು ಪ್ರವೇಶಿಸಬಹುದು, ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಪೋಷಕಾಂಶಗಳ ಕೊರತೆಬೇರೆಯವರ ತಟ್ಟೆಯಲ್ಲಿ ಆಹಾರ ಸೇವಿಸಿದಾಗ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ಸಿಗುವುದಿಲ್ಲ. ದೇಹಕ್ಕೆ ಬೇಕಾದ ಪೋಷಣೆ ಸಿಗದೇ, ಕೊರತೆ ಉಂಟಾಗುತ್ತದೆ.  

ಅಲರ್ಜಿ ಸಮಸ್ಯೆಬೇರೆಯವರ ಎಂಜಲು ಆಹಾರ ಸೇವನೆಯಿಂದ ಅಲರ್ಜಿ ಹರಡಬಹುದು. ಇನ್ನೊಬ್ಬರ ಪ್ಲೇಟ್ ಅನ್ನು ಹಂಚಿಕೊಳ್ಳುವುದು ಸಮಸ್ಯೆಗೆ ಕಾರಣವಾಗುತ್ತದೆ.

ಹಾಗಾಗಿ ಏನನ್ನಾದರೂ ತಿನ್ನುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಿರಿ. ಬರಿಗೈಯಿಂದ ಊಟ ಬಡಿಸಬೇಡಿ. ಯಾವುದೇ ಆಹಾರದಿಂದ ಅಲರ್ಜಿ ಇದ್ದರೆ ಅದರ ಬಗ್ಗೆ ತಿಳಿಸಿ. ಸಾಧ್ಯವಾದಷ್ಟು ಎಂಜಲು ಆಹಾರ ತಿನ್ನುವುದನ್ನು ತಪ್ಪಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...