alex Certify ಊಟಕ್ಕೆ ಬಾಳೆ ಎಲೆ ಬಳಸಿದ್ರೆ ಹೆಚ್ಚಾಗುತ್ತದೆ ಇಮ್ಯೂನಿಟಿ; ಅನೇಕ ರೋಗಗಳಿಂದ್ಲೂ ಸಿಗಲಿದೆ ಮುಕ್ತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟಕ್ಕೆ ಬಾಳೆ ಎಲೆ ಬಳಸಿದ್ರೆ ಹೆಚ್ಚಾಗುತ್ತದೆ ಇಮ್ಯೂನಿಟಿ; ಅನೇಕ ರೋಗಗಳಿಂದ್ಲೂ ಸಿಗಲಿದೆ ಮುಕ್ತಿ….!

ಆರೋಗ್ಯ ಮತ್ತು ಜೀವನಶೈಲಿಯ ವಿಷಯದಲ್ಲಿ ಜಗತ್ತು ಮತ್ತೆ ಪ್ರಾಚೀನ ಮಾರ್ಗಗಳನ್ನು ಅನುಸರಿಸುತ್ತಿದೆ. ಹಿಂದಿನ ಕಾಲದಲ್ಲಿ  ಮದುವೆ ಅಥವಾ ಯಾವುದೇ ಸಮಾರಂಭದಲ್ಲಿ ಮರದ ಎಲೆಗಳಿಂದ ಮಾಡಿದ ತಟ್ಟೆಗಳು ಮತ್ತು ಥಾಲಿಗಳಲ್ಲಿ ಊಟ ಬಡಿಸಲಾಗುತ್ತಿತ್ತು. ಈಗ ಆನ್‌ಲೈನ್‌ನಲ್ಲಿ ಸಗಣಿ ಕೇಕ್, ತಟ್ಟೆಗಳು ಮತ್ತು ಥಾಲಿಗಳಿಗೆ ಬೇಡಿಕೆ ಹೆಚ್ಚಿದೆ.

ಅಂಥದ್ದೇ ಹಳೆಯ ಸಂಪ್ರದಾಯ ದಕ್ಷಿಣ ಭಾರತದಲ್ಲಿ ಇಂದಿಗೂ ರೂಢಿಯಲ್ಲಿದೆ. ದಕ್ಷಿಣ ಭಾರತದಲ್ಲಿ ಬಾಳೆ ಎಲೆಗಳನ್ನೇ ಬಳಸಲಾಗುತ್ತದೆ. ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ. ಇದರಿಂದಾಗಿ ದೇಹವು ರೋಗ ಮುಕ್ತವಾಗಿರುತ್ತದೆ. ಬಾಳೆ ಎಲೆಗಳಲ್ಲಿ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಮತ್ತು ಎಂಟಿಒಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅನೇಕ ಸಾಂಕ್ರಾಮಿಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಬಾಳೆ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಕಾರಣದಿಂದಾಗಿ ಆಹಾರದ ಹಾನಿಕಾರಕ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತವೆ. ಊಟ ಮಾಡಿ ಎಸೆದ ಪ್ಲಾಸ್ಟಿಕ್ ತಟ್ಟೆ ಮಣ್ಣಾಗುವುದಿಲ್ಲ. ಆದರೆ ಬಾಳೆ ಎಲೆ ಪರಿಸರ ಸ್ನೇಹಿಯಾಗಿದೆ ಮತ್ತು ಕಡಿಮೆ ಸಮಯದಲ್ಲಿ ಮಣ್ಣಲ್ಲಿ ಗೊಬ್ಬರವಾಗುತ್ತದೆ. ಬಾಳೆ ಎಲೆಯಲ್ಲಿ ಆಹಾರವನ್ನು ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್‌ಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ. ಬಾಳೆ ಎಲೆ ರಾಸಾಯನಿಕ ಮುಕ್ತವೂ ಹೌದು. ಹಾಗಾಗಿ ಊಟ, ಉಪಹಾರಕ್ಕೆ ಬಾಳೆ ಎಲೆಗಳನ್ನು ಬಳಸುವುದು ಅತ್ಯಂತ ಸೂಕ್ತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...